ಮಡಿಕೇರಿ, ಜೂ. 6: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಕಾಲೇಜಿನ ಯೂತ್ ರೆಡ್ ಕ್ರಾಸ್ ವತಿಯಿಂದ ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಬೀದಿ ನಾಟಕ ಗಮನ ಸೆಳೆಯಿತು. ಮೆಡಿಕಲ್ ಕಾಲೇಜಿನ ಯೂತ್ ರೆಡ್ ಕ್ರಾಸ್‍ನ 42 ವಿದ್ಯಾರ್ಥಿಗಳು ಪರಿಸರ ಜಾಗೃತಿ ಸಂದೇಶ ಸಾರಿದರು. ಕಾರ್ಯಕ್ರಮದಲ್ಲಿ ಕೊಡಗು ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷ ಬಿ.ಕೆ. ರವೀಂದ್ರರೈ, ಕಾರ್ಯದರ್ಶಿ ಹೆಚ್.ಎಸ್. ಮುರಳಿ, ಯೂತ್ ರೆಡ್ ಕ್ರಾಸ್ ಅಧ್ಯಕ್ಷ ಎಂ. ಧನಂಜಯ್, ಸಂಯೋಜಕಿ ಡಾ. ವೀಣಾ, ಸಹ ಪ್ರಾಧ್ಯಾಪಕ ಡಾ. ಗಂಗಾಧರ, ಸಹಾಯಕ ಪ್ರಾದ್ಯಾಪಕ ಡಾ. ಸುಹಾಸ್ ವೈ ಶಿರೂರ್ ಹಾಜರಿದ್ದರು.