ಮಡಿಕೇರಿ, ಜೂ. 6: ಸಿ.ಎನ್.ಸಿ. ವತಿಯಿಂದ ವಿಶ್ವ ಪರಿಸರ ದಿನದ ಅನ್ವಯ “ದೇವಾಟ್‍ಪರಂಬ್ ನರಮೇಧ ದುರಂತ ಸಮಾಧಿ” ಸ್ಥಳದಲ್ಲಿ ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಸಸಿಗಳನ್ನು ನೆಡಲಾಯಿತು.
ದೇವಾಟ್‍ಪರಂಬ್ ನರಮೇಧ ಸಮಾಧಿಯಲ್ಲಿ ಕೊಡವ ದಿವ್ಯಾತ್ಮಗಳು ನೆಲೆಸಿದ್ದು, ನಾವು ನೆಟ್ಟ ನೆರಳು ನೀಡುವ ಹಸಿರು ಗಿಡ ಮತ್ತು ಫಲ ಬಿಡುವ ಗಿಡಗಳು ಮುಂದೆ ಹೆಮ್ಮರವಾಗಿ ಬೆಳೆಯುವ ಮೂಲಕ ಗತಿಸಿದ ದಿವ್ಯಾತ್ಮಗಳಿಗೆ ಶಾಶ್ವತ ನೆರಳು ಮತ್ತು ತಂಪು ನೀಡಲಿ ಎಂದು ಈ ಸಂದರ್ಭ ನಾಚಪ್ಪ ಆಶಿಸಿದರು.
ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕಾಟುಮಣಿಯಂಡ ಉಮೇಶ್, ಮಂದಪಂಡ ಮನೋಜ್, ಬೇಪಡಿಯಂಡ ದಿನು, ಪುಳ್ಳಂಗಡ ನಟೇಶ್ ಭಾಗವಹಿಸಿದ್ದರು