ಮಡಿಕೇರಿ, ಜೂ. 6: ಬೆಸಗೂರಿನ ಕಾಮಣಿ ಮಣಿ ಶೈಕ್ಷಣಿಕ ದತ್ತಿ ವತಿಯಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿವಿಧ ಪ್ರವೇಶ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕೊಡಗಿನ ಮೂಲದ ಹಲವು ಸಾಧಕರು ಹಾಗೂ ಜನಪರ ಚಿಂತಕರು ಒಟ್ಟುಗೂಡಿ ಮಕ್ಕಳಿಗೆ ಈ ವರ್ಷದಿಂದ ಉಚಿತವಾಗಿ ಸಿ ಡೀಯೆಸ್, ಸಿಜಿಎಲ್ (ಇನ್ಕಂ ಟ್ಯಾಕ್ಸ್ ಇನ್ಸ್‍ಪೆಕ್ಟರ್ ಇತ್ಯಾದಿ) ಎನ್‍ಡಿಯೆ ಹಾಗೂ ಸೈನಿಕ ಶಾಲೆ ಕೂಡಿಗೆ ಈ ಪ್ರವೇಶ ಪರೀಕ್ಷೆಗಳಿಗೆ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ತರಬೇತಿಗೆ ಪ್ರತಿ ವಿಷಯಕ್ಕೂ ತಲಾ 5 ವಿದ್ಯಾರ್ಥಿಗಳಂತೆ 20 ವಿದ್ಯಾರ್ಥಿಗಳನ್ನು, ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಫೆಸರ್ ಪಾಂಡಂಡ ಮಂದಣ್ಣ ಅವರ ನೇತೃತ್ವದಲ್ಲಿ ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ವಿವರಗಳಿಗೆ ಮೊ. 8277235644, 9845013053 (ಪ್ರತ್ವಿ ಉತ್ತಯ್ಯ) ಹಾಗೂ 9448798401 (ಪ್ರೊ. ಮಂದಣ್ಣ) ಇವರನ್ನು ಸಂಪರ್ಕಿಸಬಹುದು.