ಮಡಿಕೇರಿ, ಜೂ. 6: ಸ್ಪೇನ್‍ನ ಮ್ಯಾಡ್ರಿಡ್‍ನಲ್ಲಿ ತಾ. 10ರಿಂದ ಆರಂಭಗೊಳ್ಳಲಿರುವ ಎಂಟು ರಾಷ್ಟ್ರಗಳ ಪುರುಷರ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡವು ತೆರಳಿದೆ. 21 ವರ್ಷದೊಳಗಿನ ಜೂನಿಯರ್ ಇಂಡಿಯಾ ತಂಡದೊಂದಿಗೆ ತಂಡದ ತರಬೇತುದಾರ (ಕೋಚ್)ರಾಗಿ ಕೊಡಗಿನ ವೀರಾಜಪೇಟೆಯವರಾದ ಬೊಳ್ಳೆಪಂಡ ಜೆ. ಕಾರ್ಯಪ್ಪ ಅವರು ಪ್ರಯಾಣ ಬೆಳೆಸಿದ್ದಾರೆ. ಭಾರತ, ಆಸ್ಟ್ರೇಲಿಯ, ನೆದರ್‍ಲ್ಯಾಂಡ್, ಸ್ಪೇನ್, ಜರ್ಮನಿ, ಬ್ರಿಟನ್, ಆಸ್ಟ್ರಿಯಾ ಹಾಗೂ ಬೆಲ್ಜಿಯಂ ರಾಷ್ಟ್ರಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ಬಿ.ಜೆ. ಕಾರ್ಯಪ್ಪ ಅವರು ಕಳೆದ ಹಲವು ವರ್ಷಗಳಿಂದ ಭಾರತೀಯ ಹಾಕಿ ತಂಡದ ವಿವಿಧ ವಿಭಾಗಗಳಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.