ಸೋಮವಾರಪೇಟೆ,ಜೂ.6: ತಾಲೂಕು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ 18ನೇ ವರ್ಷದ ಸರ್ವ ಸದಸ್ಯರ ಸಭೆ ತಾ. 7ರಂದು (ಇಂದು) ಪೂರ್ವಾಹ್ನ 10 ಗಂಟೆಗೆ ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆಯಲಿದೆ.

ಸಂಘದ ಅಧ್ಯಕ್ಷ ನಿರ್ವಾಣಿ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್, ಸಂಘದ ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್, ಹಿರಿಯ ನಾಗರಿಕರ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಟಿ. ದಾಮೋದರ ಭಾಗವಹಿಸಲಿದ್ದಾರೆ.

ಬಿಎಸ್‍ಸಿ ಮತ್ತು ಎಂಎಸ್‍ಸಿಯಲ್ಲಿ ಚಿನ್ನದ ಪದಕ ಪಡೆದ ತೋಳೂರು ಶೆಟ್ಟಳ್ಳಿಯ ಚಾವಡಿಮನೆ ಪ್ರಜ್ಞಾ ಶಿವಕುಮಾರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು. ತೋಳೂರುಶೆಟ್ಟಳ್ಳಿಯ ಕೆ.ಎ. ಬಸಪ್ಪ, ಹೊಸಬೀಡಿನ ಹೆಚ್.ಪಿ. ತಿಮ್ಮಯ್ಯ, ಹಾನಗಲ್‍ನ ಹೆಚ್.ಆರ್. ಧರ್ಮಪ್ಪ, ಆಲೂರು ಸಿದ್ದಾಪುರದ ಕೆ.ಕೆ. ರಾಣಿ, ಲಕ್ಷ್ಮಮ್ಮ ಅವರುಗಳನ್ನು ಸನ್ಮಾನಿಸ ಲಾಗುವದು ಎಂದು ಕಾರ್ಯದರ್ಶಿ ಬಿ.ಕೆ. ತಿಮ್ಮಯ್ಯ ತಿಳಿಸಿದ್ದಾರೆ.