ಶ್ರೀಮಂಗಲ, ಜೂ. 6 : ಶ್ರೀಮಂಗಲ ವನ್ಯ ಜೀವಿ ವಲಯ ವ್ಯಾಪ್ತಿಗೆ ಸೇರುವ ಬೀರುಗ, ನೆಮ್ಮಲೆ, ತೆರಾಲು, ಬಾಡಗರಕೇರಿ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಿಂದ ಕೃಷಿಗೆ ನಷ್ಟ ಉಂಟಾಗುತ್ತಿದ್ದು, ಕಾಡಾನೆಗಳನ್ನು ಅರಣ್ಯಕ್ಕಟ್ಟಲು ತಾ. 7 ಮತ್ತು 8ರಂದು (ಇಂದು ಮತ್ತು ನಾಳೆ) ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಯಲಿದೆ.ಈ ಎರಡು ದಿನಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ಈ ವ್ಯಾಪ್ತಿಯ ಗ್ರಾಮಸ್ಥರು ಮತ್ತು ಸಾರ್ವಜನಿಕರು ಎಚ್ಚರದಿಂದಿದ್ದು ಸಹಕಾರ ನೀಡಬೇಕಾಗಿ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.