ಕುಶಾಲನಗರ, ಜೂ. 5: ಜೆಸಿಐ ಕುಶಾಲನಗರ ಕಾವೇರಿ ಆಶ್ರಯದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪ್ರಯಾಸ್ ದಿನ ಆಚರಣೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಕಿಟ್ಗಳನ್ನು ವಿತರಿಸುವ ಮೂಲಕ ವೈಯಕ್ತಿಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ವಲಯ ಅಧ್ಯಕ್ಷ ಜಫಿನ್ ಜಾಯ್ ಮಾತನಾಡಿ, ಜೆಸಿಯ ಧ್ಯೇಯೋದ್ದೇಶ, ಸಾಮಾಜಿಕ ಕಾರ್ಯಕ್ರಮಗಳ ಯೋಜನೆಗಳ ಬಗ್ಗೆ ವಿವರಿಸಿದರು. ಜೆಸಿಐ ಕಾರ್ಯಕ್ರಮ ಸಂಯೋಜಕಿ ರೇಖಾ ಪೂರ್ಣೇಶ್ ಸಲಹೆಗಳನ್ನು ನೀಡಿದರು. ಜೆಸಿಐ ಕುಶಾಲನಗರ ಅಧ್ಯಕ್ಷ ಜೆಸಿ ಪ್ರಶಾಂತ್, ಕಾರ್ಯದರ್ಶಿ ಸುಜಯ್, ಪುನಿತ್, ಶಾಲಾ ಮುಖ್ಯ ಶಿಕ್ಷಕಿ ಸಾವಿತ್ರಿ ಮತ್ತಿತರರು ಇದ್ದರು.