ಕರಿಕೆ, ಜೂ. 4: ಕಳೆದ ವರ್ಷ ಮೇ ಕೊನೆಯ ವಾರದಲ್ಲಿ ಆರಂಭ ಗೊಂಡ ವರುಣನ ಅಬ್ಬರ ಕ್ಕೆ ಹಲವಾರು ಜನ ಜಾನುವಾರುಗಳನ್ನು ಬಲಿಪಡೆಯುವದರೊಂದಿಗೆ ಕೊಡಗಿನಾದ್ಯಾಂತ ರಸ್ತೆ,ವಿದ್ಯುತ್ ,ಸಾರಿಗೆ ಸಂಪರ್ಕ ಕಡಿತಗೊಂಡು ಜನತೆ ಸಾಕಷ್ಟು ಸಂಕಷ್ಟ, ಸವಾಲುಗಳನ್ನು ಎದುರಿಸಿ ಕಳೆದ ಘಟನಾವಳಿಗಳು ಮಾಸುವ ಮುನ್ನವೇ ಮತ್ತೆ ಮಳೆಗಾಲ ಆರಂಭದ ಲಕ್ಷಣಗಳು ಗೋಚರಿಸುತ್ತಿವೆ.ಕಳೆದ ಭೀಕರ ಸನ್ನಿವೇಶವನ್ನ ದಿಟ್ಟತನದಿಂದ ಎದುರಿಸಿ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾದರು. ತದನಂತರ ಹಂತ ಹಂತವಾಗಿ ರಸ್ತೆಗಳ ಪುನರ್‍ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡರು ಅಲ್ಲದೆ ಕೆಲವು ಕಡೆ ಕಾಮಗಾರಿಯು ಭರದಿಂದ ಸಾಗಿದೆ.ಆದರೆ ಗಡಿಗ್ರಾಮದ ಕರಿಕೆ- ಭಾಗಮಂಡಲ ಅಂತರ್ ರಾಜ್ಯ ಕೇರಳ ಕ್ಕೆ ಹಾಗೂ ದ.ಕ.ಜಿಲ್ಲೆಯ ಸುಳ್ಯ ಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸಂಪರ್ಕ ಗುಡ್ಡ ಕುಸಿತದ ಪರಿಣಾಮ ಎರಡು ಮೂರು ದಿವಸ ಸಂಪರ್ಕ ಕಡಿತಗೊಂಡಿತ್ತು.(ಮೊದಲ ಪುಟದಿಂದ) ಇದೇ ಸಂದರ್ಭದಲ್ಲಿ ಮಡಿಕೇರಿ ಸಂಪಾಜೆ ಬಂಟ್ವಾಳ ಹೆದ್ದಾರಿ ಕೂಡ ಗುಡ್ಡಕುಸಿತದ ಪರಿಣಾಮ ಕೆಲ ತಿಂಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದೇ ಸಂದರ್ಭದಲ್ಲಿ ಅಂದಿನ ಕೊಡಗು ಜಿಲ್ಲಾಧಿಕಾರಿಗಳ ಆದೇಶ ದನ್ವಯ ಭಾಗಮಂಡಲ-ಕರಿಕೆ- ಸುಳ್ಯ ಮಾರ್ಗವಾಗಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಲಿಸಲಾಗಿತ್ತು ಅಲ್ಲದೇ ಪ್ರಯಾಣಿಕರು, ಸಾರ್ವಜನಿಕರ ಅನುಕೂಲಕ್ಕೆ ಮಡಿಕೇರಿ- ಭಾಗಮಂಡಲ-ಕರಿಕೆ- ಸುಳ್ಯ ಮಾರ್ಗವಾಗಿ ಹಲವು ಗ್ರಾಮೀಣ ಸಾರಿಗೆ ಬಸ್ ನಿತ್ಯ ಸಂಚರಿಸುವ ವ್ಯವಸ್ಥೆ ಕೂಡಾ ಮಾಡಲಾಗಿತ್ತು. ಒಂದೂವರೆ ಕಿ.ಮಿ.ಕಳಪೆ ಡಾಮರೀಕರಣ ಮಾಡಿ ಗುತ್ತಿಗೆದಾರ ಕೈತೊಳೆದುಕೊಂಡದ್ದು ಡಾಮರು ಸಂಪೂರ್ಣವಾಗಿ ಕಿತ್ತು ಹೋಗಿದ್ದು ಮರು ಡಾಮರೀಕರಣ ಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳದಿರುವದು ಸಾರ್ವಜನಿಕರಲ್ಲಿ ಅಸಮಾಧಾನ ಮಾಡಿದೆ.

ಕನಿಷ್ಟ ಹತ್ತು ಕಿ.ಮಿ.ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಮೂರು ವರ್ಷಗಳಿಂದ ಪ್ರಯಾಣಿಕರು ಪರದಾಡುತ್ತಿದ್ದು ಈ ಬಾರಿ ರಸ್ತೆ ಹಳ್ಳ ಹಿಡಿದಿದೆ. ಇದೀಗ ಜೂನ್ ಮೊದಲ ವಾರ ಕಳೆದರೂ ಕನಿಷ್ಟ ಕರಿಕೆ ರಸ್ತೆಯ ಗುಂಡಿ ಮುಚ್ಚುವ ಗೋಜಿಗೂ ಗ್ರಾಮದಲ್ಲೇ ವಾಸವಿರುವ ದಿನ ನಿತ್ಯ ಇದೇ ರಸ್ತೆ ಮಾರ್ಗವಾಗಿ ಮಡಿಕೇರಿಗೆ ಸಂಚರಿಸುವ ಜಿಲ್ಲೆ, ತಾಲೂಕು ನ್ನು ಪ್ರತಿನಿಧಿಸುವ ಜನಪ್ರತಿನಿಧಿ ಗಳು ಎನಿಸಿಕೊಂಡವರು, ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಮುಂದಾಗದಿರುವದು ದುರಂತವೇ ಸರಿ.

ಈ ಬಾರಿ ಪ್ರಕೃತಿ ಮುನಿದು ಮಳೆರಾಯನ ಆರ್ಭಟಕ್ಕೆ ಒಂದು ವೇಳೆ ಸಂಪಾಜೆ ಸುಳ್ಯ ರಸ್ತೆ ಸಂಪರ್ಕ ಕಡಿತಗೊಂಡರೆ ಉಳಿದ ಏಕೈಕ ಮಾರ್ಗ ಇದೇ ರಸ್ತೆ ಸಂಚಾರ ವ್ಯವಸ್ಥೆ, ಇದರ ಸಂಪೂರ್ಣ ಅರಿವಿದ್ದರೂ ಪ್ರಕೃತಿ ವಿಕೋಪ ಎದುರಿಸಲು ಜಿಲ್ಲಾಡಳಿತ ಹಲವು ಮುನ್ನೆಚ್ಚರಿಕೆ ಸಭೆ ನಡೆಸಿ ಸಂಬಂಧಿಸಿದ ಇಲಾಖೆಗೆ ಆಯಾ ಇಲಾಖೆಗಳ ಕರ್ತವ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಲಹೆ ಸೂಚನೆ ನೀಡಿ ತಿಂಗಳುಗಳು ಕಳೆಯುತ್ತಾ ಬಂದರು ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಎಚ್ಚೆತ್ತಂತೆ ಕಾಣುತ್ತಿಲ್ಲ. ಕಾರಣ ಕಳೆದ ಬಾರಿ ಬಾಚಿಮಲೆ ಎಂಬಲ್ಲಿ ಬೃಹತ್ ಗುಡ್ಡ ಕುಸಿದು ರಸ್ತೆಗೆ ಅಡ್ಡ ಉರುಳಿ ಬಿದ್ದಿದ್ದು ವಾಹನ ಸಂಚರಿಸಲು ತಕ್ಕಂತೆ ಜೆಸಿಬಿ ಯಂತ್ರ ಬಳಸಿ ರಸ್ತೆ ನಿರ್ಮಾಣ ಮಾಡಿದ್ದು ಉಳಿದ ಮಣ್ಣು ಹಾಗೆಯೇ ಉಳಿದಿದೆ ಇದೀಗ ಸುರಿಯುತ್ತಿರುವ ಮಳೆಗೆ ಮಣ್ಣು ರಸ್ತೆ ಬದಿಗೆ ಕುಸಿಯುತ್ತಿದ್ದು ರಸ್ತೆಯಲ್ಲಿ ಹರಿದು ಹೋಗುತ್ತಿದೆ. ಮಣ್ಣು ತೆರವು ಮಾಡಿ ಚರಂಡಿ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕಿದ್ದ ಇಲಾಖೆ

ಇದುವರೆಗೆ ಇತ್ತ ಸುಳಿದಂತೆ ಕಾಣುತ್ತಿಲ್ಲ ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಇಲಾಖೆಗೆ ರಸ್ತೆದುರಸ್ತಿ ಮಾಡಲು ಸೂಕ್ತ ನಿರ್ದೇಶನ ನೀಡಿ ಪ್ರಯಾಣಿಕರು ಶಾಲಾ ವಿದ್ಯಾರ್ಥಿ ಗಳು ನಿರಾತಂಕ ವಾಗಿ ಮಳೆಗಾಲ ದಲ್ಲಿ ಸಂಚರಿಸುವಂತೆ ಮಾಡು ವಂತಾಗಲಿ ಅಲ್ಲದೆ ಆಡಳಿತ ವ್ಯವಸ್ಥೆಯ ಮೇಲೆ ಪ್ರಜೆಗಳು ಇಟ್ಟಿರುವ ನಂಬಿಕೆ,ನಿರೀಕ್ಷೆ ಹುಸಿ ಯಾಗದಿರಲಿ ಎಂಬದು ಸಾರ್ವಜನಿಕರು ಆಗ್ರಹಿಸಿದ್ದಾರೆ.

-ಹೊದ್ದೆಟ್ಟಿ ಸುಧೀರ್ ಕುಮಾರ್