ಸೋಮವಾರಪೇಟೆ, ಜೂ.3: ‘ಕಳೆದ 2014ರ ಚುನಾವಣೆಯಲ್ಲಿ ಕಸ್ತೂರಿ ರಂಗನ್ ವರದಿಯಿಂದ ಕೊಡಗಿಗೆ ಯಾವದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ನೀಡಿದ್ದ ಭರವಸೆ ಈಡೇರಿಸಿದ್ದೇನೆ. ಮುಂದಿನ 5 ವರ್ಷಗಳಲ್ಲಿ ಕಸ್ತೂರಿ ರಂಗನ್ ವರದಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೇನೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವಂತೆ ರಾಜ್ಯದಲ್ಲೂ ಬಿಎಸ್‍ವೈ ಸರ್ಕಾರ ಬಂದರೆ ಇನ್ನಷ್ಟು ಯೋಜನೆಗಳು ಕೊಡಗಿಗೆ ಬರಲಿದೆ’ ಎಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಿಂದ 2ನೇ ಬಾರಿಗೆ ವಿಜಯಶಾಲಿ ಯಾಗಿರುವ ಸಂಸದ ಪ್ರತಾಪ್‍ಸಿಂಹ ನುಡಿದರು.ಭಾರತೀಯ ಜನತಾ ಪಾರ್ಟಿಯ ವತಿಯಿಂದ ಇಲ್ಲಿನ ಜೇಸೀ ವೇದಿಕೆಯಲ್ಲಿ (ಮೊದಲ ಪುಟದಿಂದ) ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೊಡಗಿನ ಜನರ ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದರು.

ಈಗಾಗಲೇ ಚನ್ನರಾಯಪಟ್ಟಣ- ಸೋಮವಾರಪೇಟೆ-ಮಡಿಕೇರಿ-ಮಾಕುಟ್ಟ ಹೆದ್ದಾರಿ ನಿರ್ಮಾಣಕ್ಕೆ ಡಿಪಿಆರ್ ಸರ್ವೆ ನಡೆಯುತ್ತಿದ್ದು, ಮುಂದಿನ 5 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವದು. ಇದರೊಂದಿಗೆ ಕೇರಳ-ಕಾಞಂಗಾಡ್-ಕರಿಕೆ-ಭಾಗಮಂಡಲ-ಮಡಿಕೇರಿ ಹೆದ್ದಾರಿ, ಮೈಸೂರು-ಮಡಿಕೇರಿ ನಾಲ್ಕುಪಥದ ರಸ್ತೆ, ಬೆಂಗಳೂರು-ಮೈಸೂರು 10 ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಕೇಂದ್ರ ಸರ್ಕಾರದಿಂದ ನಡೆಯುತ್ತಿದ್ದು, ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೂ ಪೂರಕವಾಗಲಿದೆ ಎಂದು ಅಭಿಪ್ರಾಯಿಸಿದರು.

ಇದರೊಂದಿಗೆ ಕುಶಾಲನಗರದವರೆಗೆ ರೈಲ್ವೇ ಯೋಜನೆಗೆ ಅನುದಾನ ಬಿಡುಗಡೆಯಾಗಿದ್ದು, ರಾಜ್ಯ ಸರ್ಕಾರ ಭೂಮಿ ನೀಡಿದ ತಕ್ಷಣ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಪರಿಸರ ನಾಶವಾಗದಂತೆ ರೈಲ್ವೇ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತೇವೆ. ಜತೆಗೆ ಜಿಲ್ಲೆಯಿಂದ ಪಾರ್ಸ್‍ಪೋರ್ಟ್‍ಗೆ ಹೆಚ್ಚು ಬೇಡಿಕೆ ಬಂದರೆ ಕೊಡಗಿನಲ್ಲೇ ಸೇವಾ ಕೇಂದ್ರ ಪ್ರಾರಂಭಿಸಲಾಗುವದು ಎಂದ ಪ್ರತಾಪ್ ಸಿಂಹ, ಕಾಫಿ, ಏಲಕ್ಕಿ, ಕರಿಮೆಣಸು ಸೇರಿದಂತೆ ತಂಬಾಕು ಬೆಳೆಗಾರರ ಸಮಸ್ಯೆ ಬಗೆಹರಿಸಲು ಕೇಂದ್ರ ಸಚಿವರೊಂದಿಗೆ ವ್ಯವಹರಿಸಲಾಗುವದು ಎಂದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ,ರಾಷ್ಟ್ರಭಕ್ತಿಯೊಂದಿಗೆ ರಾಷ್ಟ್ರ ರಕ್ಷಣೆಗಾಗಿ ಕೊಡಗಿನ ಜನ ಮತ ಚಲಾಯಿಸಿದ್ದಾರೆ. 85 ಸಾವಿರ ಮುನ್ನಡೆ ದೊರೆತಿರುವದು ದಾಖಲೆಯಾಗಿದೆ. ಮುಂದಿನ ದಿನಗಳಲ್ಲಿ ಕೊಡಗಿಗೆ ರೈಲ್ವೇ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಮಿನಿ ಏರ್‍ಪೋರ್ಟ್ ನಿರ್ಮಾಣಕ್ಕೆ ಸಂಸದರು ಮುಂದಾಗಬೇಕು ಎಂದರು. ಉಸ್ತುವಾರಿ ಸಚಿವರಿಗೆ ಕೊಡಗಿನಲ್ಲಿ ಕೆಲಸ ಮಾಡಲು ಕೆ.ಆರ್. ನಗರದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ವಿಜಯ ದಾಖಲಿಸಿದ ಹಿನ್ನೆಲೆ ಇಂದು ಸೋಮವಾರಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ನಡೆಯಿತು.

ಇಲ್ಲಿನ ವಿವೇಕಾನಂದ ವೃತ್ತದಿಂದ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ತೆರಳಿದ ನೂರಾರು ಕಾರ್ಯಕರ್ತರು ಬಿಜೆಪಿ, ಮೋದಿ, ಪ್ರತಾಪ್‍ಸಿಂಹ, ಅಪ್ಪಚ್ಚು ರಂಜನ್ ಪರ ಘೋಷಣೆಗಳನ್ನು ಮೊಳಗಿಸಿದರು. ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು, ಮಹಿಳೆಯರು ಬಿಜೆಪಿ ಬಾವುಟ ಹಿಡಿದು ಹೆಜ್ಜೆಹಾಕಿದರು.

ಮಡಿಕೇರಿ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣ, ತ್ಯಾಗರಾಜ ರಸ್ತೆ, ಬಸವೇಶ್ವರ ರಸ್ತೆ, ಮುಖ್ಯರಸ್ತೆ ಮೂಲಕ ವಿಜಯೋತ್ಸವ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬ್ಯಾಂಡ್‍ಸೆಟ್, ಡಿ.ಜೆ. ಸಂಗೀತಕ್ಕೆ ಶಾಸಕ ರಂಜನ್ ಸೇರಿದಂತೆ ಕಾರ್ಯಕರ್ತರು ಹೆಜ್ಜೆ ಹಾಕಿದರು.

ಸಂಸದ ಪ್ರತಾಪ್ ಸಿಂಹ, ಮಾಜೀ ಸಚಿವ, ಹಾಸನ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎ. ಮಂಜು, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಶಾಸಕ ಅಪ್ಪಚ್ಚು ರಂಜನ್, ಭಾರತೀಶ್, ಎಸ್.ಜಿ. ಮೇದಪ್ಪ, ವಿ.ಎಂ. ವಿಜಯ ಸೇರಿದಂತೆ ಇತರರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಗುತ್ತಿಗೆದಾರರೇ ಬೇಕಾಗಿದ್ದಾರೆ. ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ನೀಡದೇ ಹೊರಗಿನವರನ್ನು ಕರೆತರುವದು ಯಾಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಯಮುನ ಚಂಗಪ್ಪ ಅವರುಗಳು ಮಾತನಾಡಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪಕ್ಷದ ಕಾರ್ಯದರ್ಶಿ ವಿ.ಕೆ. ಲೋಕೇಶ್, ಕ್ಷೇತ್ರ ಸಮಿತಿ ಅಧ್ಯಕ್ಷ ಕೊಮಾರಪ್ಪ, ಮುಖಂಡರಾದ ಎಸ್.ಬಿ. ಭರತ್‍ಕುಮಾರ್, ವಿ.ಎಂ. ವಿಜಯ, ಕುಶಾಲಪ್ಪ, ತಂಗಮ್ಮ, ಮಂಜುಳಾ, ಸಬಿತ, ಸರೋಜಮ್ಮ, ನಳಿನಿಗಣೇಶ್, ರಾಮಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.