ಸಿದ್ದಾಪುರ, ಜೂ. 4: ಕೊಡಗು ಜಿಲ್ಲಾ ಎಸ್.ಎನ್. ಡಿ.ಪಿ. ಯೂನಿಯನ್ ವತಿ ಯಿಂದ ಬಡ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಸಹಾಯಧನ ವಿತರಿಸಲಾಯಿತು. ಮರ ಗೋಡುವಿನ ನಿವಾಸಿ ಕೂಲಿ ಕಾರ್ಮಿಕ ಕೆ.ಕೆ. ಕೃಷ್ಣ ಎಂಬವರ ಪುತ್ರಿ ಕೆ.ಕೆ. ಪ್ರಿಯ ಎಂಬಾಕೆ ಹತ್ತನೇ ತರಗತಿಯಲ್ಲಿ ಉತ್ತಮ ಅಂಕವನ್ನು ಪಡೆದಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಣಕಾಸಿನ ಕೊರತೆ ಇತ್ತು. ಇದನ್ನರಿತ ಎಸ್.ಎನ್.ಡಿ.ಪಿ. ಯೂನಿಯನ್ ಪ್ರಿಯ ಅವರ ವಿದ್ಯಾಭ್ಯಾಸಕ್ಕೆ ಸಹಾಯಧನ ವಿತರಿಸಿದ್ದು, ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕಾಲೇಜಿಗೆ ದಾಖಲಿಸಲಾಯಿತು. ಈ ಸಂದರ್ಭ ಮಾತನಾಡಿದ ಯೂನಿಯನ್ ಸಂಚಾಲಕ ಕೆ.ಎನ್. ವಾಸು, ವಿದ್ಯಾರ್ಥಿನಿಯ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಸಂಘಟನೆಯೇ ಭರಸಲಿದೆ ಎಂದರು.