ಗುಡ್ಡೆಹೊಸೂರು, ಜೂ. 4: ಇಲ್ಲಿನ ಗ್ರಾ.ಪಂ. ಸಾಮಾನ್ಯ ಸಭೆಯು ಅಧ್ಯಕ್ಷೆ ಕೆ.ಎಸ್. ಭಾರತಿ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಆದರೆ ಇಲ್ಲಿನ ಬಿ.ಜೆ.ಪಿ. ಸರ್ವ ಸದಸ್ಯರು ಸಭೆಯನ್ನು ಬಹಿಷ್ಕರಿಸಿದರು. ಈ ಸಂಬಂಧ ಉಪವಿಭಾಗಾಧಿಕಾರಿ ಅವರು ಡಿ.ಎಫ್.ಓ. ಅವರನ್ನು ಭೇಟಿಯಾಗಿ ಹಕ್ಕು ಪತ್ರ ನೀಡಿರುವ ಜಾಗದಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಆದೇಶಿಸಿದೆ. ಸ್ಥಳಕ್ಕೆ ಉಪವಿಭಾಗಾಧಿಕಾರಿ ಜವರೇಗೌಡ ಭೇಟಿ ಸಂದರ್ಭ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಷಂಶುದ್ದೀನ್, ಕಂದಾಯ ನಿರೀಕ್ಷಕ ನಂದಕುಮಾರ್, ಗ್ರಾಮ ಲೆಕ್ಕಾಧಿಕಾರಿ ಗೌತಮ್ ಮತ್ತು ಗುಡ್ಡೆಹೊಸೂರು ಪಿ.ಡಿ.ಓ. ಶ್ಯಾಂ ಮತ್ತು ಸದಸ್ಯರಾದ ಪ್ರವೀಣ್, ಡಾಟಿ, ಶಶಿ, ಶಿವಪ್ಪ ಮುಂತಾದವರು ಹಾಜರಿದ್ದರು. ಗುಡ್ಡೆಹೊಸೂರು ಪಿ.ಡಿ.ಓ. ಅವರು ಈ ಹಿಂದೆ ಹಲವು ಬಾರಿ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿದ್ದರು. ಆದರೆ ಅರಣ್ಯ ಇಲಾಖೆಯಿಂದ ಅನುಮತಿ ದೊರೆತಿರಲಿಲ್ಲ. ಇದೀಗ ಡಿ.ಎಫ್.ಓ. ಅವರು ಮನೆ ನಿವೇಶನದಲ್ಲಿರುವ ಮರ ತೆರವುಗೊಳಿಸಲು ಒಪ್ಪಿರುವದಾಗಿ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಜವರೇಗೌಡ ತಿಳಿಸಿದ್ದಾರೆ.