ಚೆಟ್ಟಳ್ಳಿ, ಜೂ. 4: ಕಂಡಕರೆಯ ಸುನ್ನ ಯುವಜನ ಸಂಘದ ವತಿಯಿಂದ ಹಯಾತುಲ್ ಇಸ್ಲಾಂ ಮದರಸದಲ್ಲಿ ಇಫ್ತಾರ್ ಕೂಟ ಹಾಗೂ ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನೇತೃತ್ವವನ್ನು ಮಹಲ್ ಖತೀಬ ಮುಸ್ತಫಾ ಸಖಾಫಿ ವಹಿಸಿದ್ದರು. ಈ ಸಂದರ್ಭ ಎಸ್.ವೈ.ಎಸ್ ಅಧ್ಯಕ್ಷ ಹನೀಫ, ರಜಾಕ್, ಮಹಲ್ ಕಾರ್ಯದರ್ಶಿ ಗಫೂರ್, ಗ್ರಾಮ ಪಂಚಾಯಿತಿ ಸದಸ್ಯ ರಫಿ ಇದ್ದರು.