ಮಡಿಕೇರಿ, ಜೂ. 2: ಶೀರ್ಷಿಕೆ ನೋಡಿ ಆತಂಕ ಪಡಬೇಡಿ. ಇದೇನಪ್ಪಾ ಕಾಡಿನಲ್ಲಿರುಬೇಕಾದ ಆನೆ, ಘೆಂಡಾಮೃಗಗಳು ನಗರದಲ್ಲಿರುವ ರಾಜಾಸೀಟಿಗೂ ಲಗ್ಗೆಯಿಟ್ಟಿತೆ? ಎಂದು ಕಂಗಾಲಾಗಬೇಡಿ.
ರಾಜಾಸೀಟಿಗೆ ಆನೆ, ಘೆಂಡಾಮೃಗ ಸೇರಿದಂತೆ ಹೆಬ್ಬಾವು, ಜಿರಾಫೆ, ಒಂಟೆ, ಜಿಂಕೆ, ಡೈನೋಸರ್ ಇವುಗಳೆಲ್ಲವೂ ಬಂದಿವೆ. ಆದರೆ ಜೀವಂತವಾದವಲ್ಲ.
ಮಂಜಿನ ನಗರಿ ಮಡಿಕೇರಿಯ ಪ್ರಮುಖ ಪ್ರವಾಸಿ ತಾಣಗಳ ಲ್ಲೊಂದಾದ ರಾಜಾಸೀಟಿನಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ತೋಟಗಾರಿಕಾ ಇಲಾಖೆ ವತಿಯಿಂದ ಆನೆ, ಘೆಂಡಾಮೃಗ, ಹೆಬ್ಬಾವು, ಒಂಟೆ, ಜಿರಾಫೆ, ಡೈನೋಸರ್, ಜಿಂಕೆಯ ಕಲಾಕೃತಿಗಳನ್ನು ಉದ್ಯಾನವನದ ಅಲ್ಲಲ್ಲಿ ಅಳವಡಿಸಲಾಗಿದೆ.
ಈ ಕಲಾಕೃತಿಗಳು ನೋಡು ಗರನ್ನು ಆಕರ್ಷಿಸುತ್ತಿದ್ದು, ಪ್ರವಾಸಿಗರು ಇವುಗಳೊಂದಿಗೆ ನಿಂತು ‘ಸೆಲ್ಫಿ‘ ಕ್ಲಿಕಿಸುವ ಮೂಲಕ ಸಂಭ್ರಮಿಸುತಿದ್ದಾರೆ.