ಕುಶಾಲನಗರ, ಜೂ. 2 : ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ನಿಲ್ಲಿಸಿದ್ದ ಲಾರಿಯಲ್ಲಿ ಬ್ಯಾಟರಿ ಕಳುವಾಗಿರುವ ಕುರಿತು ಕುಶಾಲನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಚೇತನ್ ಯೋಗಾನಂದ ಎಂಬವರಿಗೆ ಸೇರಿದ ಲಾರಿಯಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ಸುಮಾರು ರೂ.15 ಸಾವಿರ ಬೆಲೆ ಬಾಳುವ ಬ್ಯಾಟರಿಯನ್ನು ಕಳವು ಮಾಡಿರುವ ಬಗ್ಗೆ ಕುಶಾಲನಗರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.