ಸುಂಟಿಕೊಪ್ಪ, ಜೂ. 2: ಬ್ಲೂ ಬಾಯ್ಸ್ ಯೂತ್ ಕ್ಲಬ್ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವ ಮತ್ತು ದಿ.ಡಿ.ಶಿವಪ್ಪ ಅವರ ಜ್ಞಾಪಕಾರ್ಥದ 24ನೇ ವರ್ಷದ ರಾಜ್ಯಮಟ್ಟದ ‘ಗೋಲ್ಡ್ ಕಪ್’ ಫುಟ್‍ಬಾಲ್ ಟೂರ್ನಿಯ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನಂಜನಗೂಡು ತಂಡವು ಕ್ಯಾಲಿಕಟ್ ಎಫ್.ಸಿ.ಕ್ಯಾಲಿಕಟ್ ತಂಡವನ್ನು ಸೋಲಿಸಿ ಗೋಲ್ಡ್ ಕಪ್ ಅನ್ನು ಮುಡಿಗೇರಿಸಿಕೊಂಡಿತು. ಭಾನುವಾರ ಸಂಜೆ ನಡೆದ ನಡೆದ ಪಂದ್ಯಾಟದಲ್ಲಿ ಕ್ಯಾಲಿಕಟ್ ಎಫ್.ಸಿ ಕ್ಯಾಲಿಕಟ್ ಮತ್ತು ನಂಜನಗೂಡು ಇಲೆವನ್ ನಂಜನಗೂಡು (ಮೊದಲ ಪುಟದಿಂದ) ಫೈನಲ್ ಪಂದ್ಯವನ್ನು ಗೋಲ್ಡ್ ಕಪ್ ದಾನಿಗಳೂ ಬೆಟ್ಟಗೇರಿ ಗ್ರೂಪ್ ತೋಟದ ಮಾಲೀಕರಾದ ಡಿ.ವಿನೋದ್ ಶಿವಪ್ಪ ಉದ್ಘಾಟಿಸಿದರು.ಪ್ರಥಮಾರ್ಧದಲ್ಲಿ ಪಂದ್ಯದ ಆರಂಭದಿಂದಲೂ 2 ತಂಡಗಳು ರಭಸದ ಆಟದ ಆಟಕ್ಕೆ ಒತ್ತನ್ನು ನೀಡಿದವು. ಭಾರೀ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಕ್ಯಾಲಿಕಟ್ ತಂಡದ ಆಟಗಾರರು ಗೋಲುಪಟ್ಟಿಗೆಗೆ ಹೊಡೆದ ಹೊಡೆತಗಳನ್ನು ನಂಜನಗೂಡು ತಂಡದ ಗೋಲ್‍ಕೀಪರ್ ಆಕರ್ಷಕವಾಗಿ ತಡೆದು ಕ್ಯಾಲಿಕಟ್ ತಂಡದ ಗೋಲು ಬಾರಿಸುವ ಪ್ರಯತ್ನವನ್ನು ವಿಫಲಗೊಳಿಸಿದರು. ಎರಡೂ ತಂಡಗಳು ಸಮಬಲದ ಪ್ರದರ್ಶನ ನೀಡುವದರೊಂದಿಗೆ ಕ್ರೀಡಾಭಿಮಾನಿಗಳಿಗೆ ಕ್ರೀಡೆಯ ರಸದೌತಣವನ್ನು ಉಣಬಡಿಸಿದವು. ಕ್ರೀಡಾಪ್ರೇಮಿಗಳ ಶಿಳ್ಳೆ ಕೇಕೆಗಳು ಕ್ರೀಡಾಪಟುಗಳನ್ನು ಹುರಿದುಂಬಿಸುವದರೊಂದಿಗೆ 2 ತಂಡಗಳ ಸಮಬಲದ ಹೋರಾಟ ದಿಂದ ಪ್ರಥಮಾರ್ಧದಲ್ಲಿ ಯಾವದೇ ಗೋಲು ದಾಖಲಾಗಲಿಲ್ಲ.
ದ್ವಿತೀಯಾರ್ಧದಲ್ಲಿ ಶಿಸ್ತುಬದ್ಧ ಆಟವನ್ನು ಪ್ರದರ್ಶಿಸಿದ ನಂಜನಗೂಡು ತಂಡದ ಆಟಗಾರರು ಚುರುಕಿನ ಆಟಕ್ಕೆ ಮಹತ್ವ ನೀಡಿದರು. ಇದೇ ಸಂದರ್ಭ ನಂಜನಗೂಡು ತಂಡದ ನವಿನ್ 18ನೇ ನಿಮಿಷದಲ್ಲಿ ಹೊಡೆದ ಗೋಲು ಕೀಪರ್‍ನ ಕಣ್ತಪ್ಪಿಸಿ ಗೋಲು ಪಟ್ಟಿಯೊಳಗೆ ನುಗ್ಗುವದರೊಂದಿಗೆ 1 ಗೋಲು ಅಂತರದ ಮುನ್ನಡೆ ತಂದುಕೊಟ್ಟರು. ಅಂತಿಮವಾಗಿ ನಂಜನಗೂಡು ಎಫ್.ಸಿ. ನಂಜನಗೂಡು ತಂಡವು 1-0 ಗೋಲುಗಳಿಂದ ಜಯಗಳಿಸಿ ಡಿ.ಶಿವಪ್ಪ ಗೋಲ್ಡ್ ಕಪ್‍ನ್ನು ತನ್ನದಾಗಿಸಿ ಕೊಂಡಿತು. ಕ್ಯಾಲಿಕಟ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.