ನಾಪೆÉÇೀಕ್ಲು, ಜೂ. 1: ನಾಪೆÉÇೀಕ್ಲು ಶ್ರೀ ಭಗವತಿ ದೇವಳದಲ್ಲಿ ಕಳೆದ 38 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕುಲ್ಲೇಟಿರ ಮಾದಪ್ಪ ಮತ್ತು 55 ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅರೆಯಡ ಡಿ. ಸೋಮಪ್ಪ ಅವರನ್ನು ದೇವಳದ ನಾರಾಯಣ ತಂತ್ರಿ ಗ್ರಾಮಸ್ಥರ ಪರವಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಕುಲ್ಲೇಟಿರ ಶಂಕರಿ ಚಂಗಪ್ಪ, ನಿವೃತ್ತ ಡಿವೈಎಸ್ಪಿ ಬೊಪ್ಪಂಡ ಕುಶಾಲಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಶಿವಚಾಳಿಯಂಡ ಜಗದೀಶ್, ಕುಲ್ಲೇಟಿರ ಅರುಣ್ ಬೇಬ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳ ಆಡಳಿತ ಮಂಡಳಿ ಉಪಾಧ್ಯಕ್ಷ ಕಂಗಾಂಡ ಉತ್ತಪ್ಪ ವಹಿಸಿದ್ದರು. ವೇದಿಕೆಯಲ್ಲಿ ಕುಂಬಂಡ ಕೇಶವ, ನಾಟೋಳಂಡ ಸಚಿನ್ ಇದ್ದರು. ಕೇಲೇಟಿರ ನಾಣಯ್ಯ ಮತ್ತು ಚಿತ್ರಾ ನಾಣಯ್ಯ ಅವರಿಂದ ಪ್ರಾರ್ಥನೆ, ಅರೆಯಡ ರಘು ಕರುಂಬಯ್ಯ ಸ್ವಾಗತಿಸಿ, ಕಂಗಾಂಡ ಜಾಲಿ ಪೂವಪ್ಪ ವಂದಿಸಿದರು.