ನಾಪೆÇೀಕ್ಲು, ಜೂ. 1: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿಗಳ ಹೆಚ್ಚಳಕ್ಕೆ ಸರಕಾರ, ಶಿಕ್ಷಣ ಇಲಾಖೆ ಒಂದೆಡೆ ಕಸರತ್ತು ನಡೆಸುತ್ತಿದೆ. ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ 176 ತಾಲೂಕುಗಳಲ್ಲಿ ಒಂದೊಂದು ಕೋಟಿ ರೂ. ವೆಚ್ಚದಲ್ಲಿ ತಲಾ ಒಂದೊಂದು ಕರ್ನಾಟಕ ಪಬ್ಲಿಕ್ ಶಾಲೆಯನ್ನು ಈಗಾಗಲೇ ಆರಂಭಿಸಲಾಗಿದೆ. ಆದರೆ ಗ್ರಾಮೀಣ ಪ್ರದೇಶದ ಹಿರಿಯರು ಶ್ರಮವಹಿಸಿ ಆರಂಭಿಸಿದ ವಿದ್ಯಾಸಂಸ್ಥೆಗಳನ್ನು ಇಂದು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.

ಇದಕ್ಕೆ ಉದಾಹರಣೆ ಪಡಿಯಾಣಿ ಸರಕಾರಿ ಪ್ರಾಥಮಿಕ ಶಾಲೆ. ಈ ಶಾಲೆಯನ್ನು 1981ನೇ ಇಸವಿಯಲ್ಲಿ ಆರಂಭಿಸಲಾಯಿತು. ಹಿಂದೆ ಈ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಇತ್ತೀಚಿನ ಆಂಗ್ಲ ಮಾಧ್ಯಮದ ವ್ಯಾಮೋಹದ ನಡುವೆಯೂ ಇಲ್ಲಿ 1ರಿಂದ 7ರ ವರೆಗೆ 80 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ವಿಪರ್ಯಾಸ ಎಂದರೆ ಇಲ್ಲಿ ಶಾಲಾ ಸಭಾಂಗಣದ ಗೋಡೆ ಕುಸಿಯಲು ಆರಂಭಿಸಿದೆ. ಈಗಾಗಲೇ ಸುಮಾರು 15 ರಿಂದ 20 ಅಡಿಯಷ್ಟು ಬಿರುಕು ಕಾಣಿಸಿಕೊಂಡಿದೆ. ಆದರೂ ಇದನ್ನು ಕೇಳುವವರೇ ಇಲ್ಲ. ಈಗ ಶಾಲೆ ಆರಂಭವಾಗಿದೆ. ಇಲ್ಲಿಯವರೆಗೆ ಎಲ್ಲಾ ವಿದ್ಯಾರ್ಥಿಗಳು ಈ ಸಭಾಂಗಣದಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸು ತ್ತಿದ್ದರು. ಆದರೆ ಈಗ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ಈ ಕಟ್ಟಡದ ಬಳಿಯಲ್ಲಿಯೇ ಓಡಾಡಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಪೆÇೀಷಕರು.

ಕೊಡಗು ಹಿಂದಿನಂತಿಲ್ಲ. ಕಳೆದ ವರ್ಷ ಅನಾಹುತ ನಡೆದ ಬಳಿಕ ಜೋರಾಗಿ ಗುಡುಗಿದರೂ ಜನತೆ ಭಯ ಬೀಳುತ್ತಾರೆ. ಭದ್ರ ಕಟ್ಟಡಗಳೇ ಮಣ್ಣು ಪಾಲಾಗಿರುವಾಗ ಇಂತಹ ದುಸ್ಥಿತಿಯಲ್ಲಿರುವ ಕಟ್ಟಡಗಳು ಉಳಿಯಲು ಸಾಧ್ಯವೇ? ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಉಳಿದಂತೆ ಇಲ್ಲಿ ಮೂಲಭೂತ ಸಮಸ್ಯೆಗಳಿಗೆ ಕೊರತೆಯಿಲ್ಲ. ಆದರೆ ಕಟ್ಟಡ ಬೀಳುವ ಹಂತದಲ್ಲಿದೆ. ಪ್ರಯೋಜನ ಏನು ಎನ್ನುವದು ಪೆÇೀಷಕರ ವಾದ. ಕೂಡಲೇ ಈ ಕಟ್ಟಡ ದುರಸ್ತಿಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬೇಕು ಎಂಬದು ಪೆÇೀಷಕರ, ಸಾರ್ವಜನಿಕರ ಒತ್ತಾಯವಾಗಿದೆ.

- ಪಿ.ವಿ. ಪ್ರಭಾಕರ್