ಸುಂಟಿಕೊಪ್ಪ, ಮೇ 31: ಬ್ಲೂ ಬಾಯ್ಸ್ ಯೂತ್ ಕ್ಲಬ್ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವದ ಮತ್ತು ದಿ.ಡಿ.ಶಿವಪ್ಪ ಅವರ ಜ್ಞಾಪಕಾರ್ಥದ 24 ನೇ ವರ್ಷದ ರಾಜ್ಯ ಮಟ್ಟದ ‘ಗೋಲ್ಡ್ ಕಪ್’ ಫುಟ್‍ಬಾಲ್ ಟೂರ್ನಿಯ ಶುಕ್ರವಾರದ ಪಂದ್ಯಾವಳಿಯಲ್ಲಿ ಕ್ಯಾಲಿಕಟ್ ಎಫ್.ಸಿ. ಮತ್ತು ಈಗಲ್ ಎಫ್.ಸಿ. ಬೆಂಗಳೂರು ತಂಡಗಳು ಜಯಗಳಿಸಿವೆ.
ಮೊದಲ ಪಂದ್ಯದ ಉದ್ಘಾಟನೆಯನ್ನು ಭಾರತದ ಬಾಸ್ಕೆಟ್ ಬಾಲ್ ಆಟಗಾರ್ತಿ ನವನೀತ ಉದಯಕುಮಾರ್ ನೆರವೇರಿಸಿದರು.
ಪಂದ್ಯದ ಮೊದಲಾರ್ಧದಲ್ಲಿ 2 ತಂಡಗಳ ನಡುವೆ ಪೈಪೋಟಿ ಏರ್ಪಟಿತ್ತು. ಹೊಂದಾಣಿಕೆಯ ಆಟದಿಂದಾಗಿ ಯಾವದೇ ಗೋಲುಗಳು ಬರಲಿಲ್ಲ.
ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟವಾಡಿದ ಬೆಂಗಳೂರು ತಂಡ ಇರಿಟ್ಟಿ
ಎರಡನೇ ಕ್ವಾರ್ಟರ್ ಫೈನಲ್ ಪಂದ್ಯವು ಆಮಿಟಿ ಎಫ್.ಸಿ.ಗದ್ದೆಹಳ್ಳ ಮತ್ತು ಕ್ಯಾಲಿಕಟ್ ಎಫ್.ಸಿ. ತಂಡಗಳ ನಡುವೆ ನಡೆಯಿತು. ಈ ಪಂದ್ಯದ ಉದ್ಘಾಟನೆಯನ್ನು ಸ್ಥಳೀಯ ಉದ್ಯಮಿ ಅಬ್ಬಾಸ್ ನೆರವೇರಿಸಿದರು.
ಪಂದ್ಯದ ಮೊದಲಾರ್ಧದ ಆರಂಭದಲ್ಲಿ ಗದ್ದೆಹಳ್ಳ ತಂಡವು ಚೆಂಡಿನ ಮೇಲೆ ಸಂಪೂರ್ಣ ಹತೋಟಿಯನ್ನು ಸಾಧಿಸಿತ್ತು. ಕೂಡಲೇ ಎಚ್ಚೆತ್ತುಕೊಂಡ ಕ್ಯಾಲಿಕಟ್ ತಂಡದ ಆಟಗಾರರು ಮಿಂಚಿನ ಮತ್ತು ಹೊಂಂದಾಣಿಕೆಯ ಆಟದತ್ತ ಒತ್ತು ನೀಡಿದರು. ತಂಡದ ಮುನ್ನಡೆ ಆಟಗಾರ ಅನುರಾಗ್ 13ನೇ ಮತ್ತು 16ನೇ ನಿಮಿಷದಲ್ಲಿ ಗೋಲು ಹೊಡೆಯುವದರ ಮೂಲಕ 2-0 ಗೋಲುಗಳ ಮುನ್ನಡೆ ಪಡೆಯಿತು.
ದ್ವಿತೀಯಾರ್ಧದಲ್ಲೂ ಹೊಂದಾಣಿಕೆಯ ಆಟವನ್ನು ಪ್ರದರ್ಶಿಸುತ್ತಾ ಉತ್ತಮ ಪಾಸುಗಳಿಂದ ಪ್ರೇಕ್ಷಕರನ್ನು ರಂಜಿಸಿತು. ಪಂದ್ಯದ 5ನೇ ನಿಮಿಷದಲ್ಲಿ ಗದ್ದೆಹಳ್ಳ ತಂಡದ ಹಮೀದ್ ಸಿಕ್ಕಿದ ಉತ್ತಮ ಅವಕಾಶವನ್ನು ಗೋಲು ಹೊಡೆಯುವಲ್ಲಿ ಯಶಸ್ವಿಯಾದರು. ಕ್ಯಾಲಿಕಟ್ ತಂಡದ ಆಟಗಾರರು ಬಿರುಸಿನ ಆಟವನ್ನು ಪ್ರದರ್ಶಿಸಿ 15ನೇ ನಿಮಿಷದಲ್ಲಿ ಜಮ್ಸದ್ ಮತ್ತೊಂದು ಗೋಲು ಹೊಡೆಯವ ಮೂಲಕ ತಂಡಕ್ಕೆ ಬಲವನ್ನು ತಂದುಕೊಟ್ಟರು. ಕೊನೆಯಲ್ಲಿ ಕ್ಯಾಲಿಕಟ್ ಎಫ್.ಸಿ. ತಂಡವು 3-1 ಗೋಲುಗಳಿಂದ ಜಯಗಳಿಸಿ ಸೆಮಿಫೈನಲ್ ಗೆ ಪ್ರವೇಶ ಪಡೆಯಿತು.
ನಾಳೆ ಸಮಾರೋಪ
ಬ್ಲೂಬಾಯ್ಸ್ ಯೂತ್ ಕ್ಲಬ್‍ನ 38ನೇ ವಾರ್ಷಿಕೋತ್ಸವ ಹಾಗೂ ಡಿ.ಶಿವಪ್ಪ ಜ್ಞಾಪಕಾರ್ಥ 24ನೇ ವರ್ಷದ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾಟದ ಸಮಾರೋಪ ಸಮಾರಂಭವು ತಾ.2 ರಂದು ಸಂಜೆ 5 ಗಂಟೆಗೆ ಜಿಯಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ವಹಿಸಲಿದ್ದಾರೆ. ಬಹುಮಾನ ವಿತರಣೆಯನ್ನು ಬೆಟ್ಟಗೇರಿ ತೋಟಗಳ ಮಾಲೀಕರಾದಡಿ. ವಿನೋದ್ ಶಿವಪ್ಪ ಅವರ ಪುತ್ರ ವಿಶಾಲ್ ಶಿವಪ್ಪ ವಿತರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಿ.ವಿನೋದ್ ಶಿವಪ್ಪ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಹಾಸನ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷ ಎ.ಲೋಕೇಶ್ ಕುಮಾರ್, ಉದ್ಯಮಿ ಮಿಟ್ಟು ಚಂಗಪ್ಪ ಜಿ.ಪಂ.ಸದಸ್ಯರುಗಳಾದ ಕೆ.ಪಿ.ಚಂದ್ರಕಲಾ, ಪಿ.ಎಂ.ಲತೀಫ್, ಕಾಫಿ ಬೆಳೆಗಾರರಾದ ಬೋಸ್‍ಮಂದಣ್ಣ, ಟಿಂಬರ್ ವ್ಯಾಪಾರಿ ಹಸೈನಾರ್ ಹಾಜಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.