ಮಡಿಕೇರಿ, ಜೂ. 1: ದೇಶದ ನೂತನ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಇನ್ನಿತರ ಸಚಿವ ಸಂಪುಟದ ಸಹದ್ಯೋಗಿಗಳೊಂದಿಗೆ ನಿನ್ನ ಸಂಜೆ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಜಿಲ್ಲೆಯ ಹಲವೆಡೆಗಳಲ್ಲಿ ಬಿ.ಜೆ.ಪಿ. ಕಾರ್ಯಕರ್ತರು, ಮೋದಿ ಅಭಿಮಾನಿಗಳು ಸಂಭ್ರಮದೊಂದಿಗೆ ವಿಜಯೋತ್ಸವ ಆಚರಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಹಲವಾರು ಕಡೆಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸುವದರೊಂದಿಗೆ ಪರಸ್ಪರ ಸಿಹಿ ಹಂಚಿ ಜಯಘೋಷಗಳೊಂದಿಗೆ ವಿಜಯೋತ್ಸವ ನಡೆಸಿದರು.
ವೀರಾಜಪೇಟೆ: ದೇಶದ ಪ್ರಧಾನಮಂತ್ರಿಯಾಗಿ ಮೋದಿ ಪ್ರಮಾಣವಚನ ಸ್ವೀಕಾರ ಮಾಡಿದ ಕ್ಷಣಕ್ಕೆ ನಗರದ ಸಂಘ ಪರಿವಾರವು ವಿಜಯೋತ್ಸವ ಆಚರಿಸಿತು.
ವೀರಾಜಪೇಟೆ ನಗರದ ಗಡಿಯಾರ ಕಂಭದ ಬಳಿ ಸಂಘ ಪರಿವಾರದ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಾಷ್ಟ್ರೀಯ ಸ್ವಯಂ-ಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪ್ರಧಾನ ಮಂತ್ರಿ ಮೋದಿ ಪರ ವಿಜಯಘೋಷ ಮಾಡಿದರು. ನಗರದ ಮುಖ್ಯ ಬೀದಿಗಳಲ್ಲಿ ಬೈಕ್ ಜಾಥಾ ನಡೆಸಿದರು. ಸುಮಾರು 200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಭಜರಂಗದಳದ ತಾಲೂಕು ಸಂಚಾಲಕ ವಿವೇಕ್ ರೈ ಮತ್ತು ನಗರ ಸಂಚಾಲಕ ದಿನೇಶ್ ನಾಯರ್ ಪ್ರಮುಖರಾದ ಹೇಮಂತ್ ಬಿ.ವಿ. ರದೀಶ್, ಭಾ.ಜ.ಪ ಪ್ರಮುಖರಾದ ಸುಜಾ ಕುಶಾಲಪ್ಪ ಅಚ್ಚಪಂಡ ಪ್ರವೀಣ್, ಪಟ್ಟಣ ಪಂಚಾಯಿತಿ ಸದಸ್ಯರಾದ ಹರ್ಷವರ್ಧನ್, ಬೊಪ್ಪಂಡ ಸುನೀತ, ಮಹದೇವ್, ನಗರ ಭಾ.ಜ.ಪ. ಪ್ರಮುಖರು ಹಾಗೂ ಕಾರ್ಯಕರ್ತರು, ಸಂಘ ಪರಿವಾರದ ಕಾರ್ಯಕರ್ತರು ಮತ್ತು ನಾಗರಿಕರು ಹಾಜರಿದ್ದರು ಪೊಲೀಸ್ ಬಂದೂಬಸ್ತ್ ಕಲ್ಪಿಸಲಾಗಿತ್ತು.
ಸುಂಟಿಕೊಪ್ಪ: ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ನಗರ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಸಂಜೆ 7 ಗಂಟೆಗೆ ನಗರ ಬಿಜೆಪಿ ಘಟಕ ಹಾಗೂ ಯುವ ಬಿಜೆಪಿ ಕಾರ್ಯಕರ್ತರು ಕನ್ನಡ ವೃತ್ತದಲ್ಲಿ ಪಕ್ಷದ ಧ್ವಜವನ್ನು ಹಿಡಿದು ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ಇನ್ನಿತರ ನಾಯಕರುಗಳಿಗೆ ಜೈಕಾರ ಹಾಕುತ್ತ ಪಟಾಕಿ ಸಿಡಿಸಿ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡರು.
ಬಿಜೆಪಿ ನಗರಾಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್, ಕಾರ್ಯದರ್ಶಿ ಬಿ.ಕೆ. ಪ್ರಶಾಂತ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿ.ಎಂ. ಸುರೇಶ್ ತಾ.ಪಂ. ಮಾಜಿ ಅಧ್ಯಕ್ಷ ಶಂಕರನಾರಾಯಣ, ಯುವ ಮೋರ್ಚಾದ ಅಧ್ಯಕ್ಷ ರಂಜಿತ್ ಪೂಜಾರಿ, ಧನು ಕಾವೇರಪ್ಪ, ಬಿ.ಕೆ. ಮೋಹನ್, ವಾಸು ಮತ್ತಿತರರು ಇದ್ದರು.
ಮೂರ್ನಾಡು: ದೇಶದ 16ನೇ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರದ ಸಮಯದಲ್ಲಿ ಮೂರ್ನಾಡಿನ ಟೀಂ ಮೋದಿ ಕಾರ್ಯಕರ್ತರು ಟೀ ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು.
ಪಟ್ಟಣದಲ್ಲಿ ಸಂಜೆ ಕಾರ್ಯಕರ್ತರು ಒಗ್ಗೂಡಿ ಟೀ ತಯಾರಿಸಿ ಸಾರ್ವಜನಿಕರಿಗೆ ನೀಡುವದರೊಂದಿಗೆ ಸಂಭ್ರಮಿಸಿದರು. ಮೋದಿ ಪ್ರಮಾಣವಚನ ಸ್ವೀಕರಿಸುವ ಸಮಯದ ನೇರ ಪ್ರಸಾರವನ್ನು ಸಾರ್ವಜನಿಕರು ವೀಕ್ಷಿಸಲು ಪರದೆ ಮೂಲಕ ವ್ಯವಸ್ಥೆಯನ್ನು ಕಲ್ಪಿಸಿದರು. ಪ್ರಮಾಣವಚನ ಸಂದರ್ಭದಲ್ಲಿ ಟೀಂ ಮೋದಿ ಹಾಗೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಲಘು ಉಪಹಾರದೊಂದಿಗೆ ಸಿಹಿ ನೀಡಿ ಸಂಭ್ರಮ ಆಚರಿಸಿದರು.
ಪೆರಂಬಾಡಿ- ವೀರಾಜಪೇಟೆ: ಕೇಂದ್ರದಲ್ಲಿ ಭಾ.ಜ.ಪ. ಸರ್ಕಾರವು ಮತ್ತೊಮ್ಮೆ ಅಧಿಕಾರದ ಹಿನ್ನೆಲೆ ವಿಜಯೋತ್ಸವ ಆಚರಿಸಲಾಯಿತು.
ವೀರಾಜಪೇಟೆ ತಾಲೂಕು ಆರ್ಜಿ ಗ್ರಾಮ ಎರಡನೆಯ ಪೆರುಂಬಾಡಿಯ ಅಯ್ಯಪ್ಪ ಭಜನಾ ಮಂದಿರದ ಮುಂಬಾಗದಲ್ಲಿ ಸಂಜೆ 7.30 ಗಂಟೆಗೆ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್ ನೇತೃತ್ವದಲ್ಲಿ ಗ್ರಾಮಸ್ಥರಿಗೆ ಸಿಹಿ ನೀಡಿ ಸಂಭ್ರಮಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ. ರಮೇಶ್, ಸದಸ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್, ನಮೋ ಗ್ರೂಪ್‍ನ ಕೆ.ಕೆ. ಅನಿಲ್ ಕುಮಾರ್, ಗಣೇಶ್ ಬಿ.ಎ., ಕೆ.ಸಿ. ಜನಾರ್ಧನ, ಹರೀಶ್, ಆನಂದ, ಜೋಸ್ ಮತ್ತು ಭಾ.ಜ.ಪ. ಕಾರ್ಯಕರ್ತರು ಹಾಜರಿದ್ದರು.ಗುಡ್ಡೆಹೊಸೂರು: ದೇಶದಲ್ಲಿ ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭ ಗುಡ್ಡೆಹೊಸೂರಿನ ಬಿ.ಜೆ.ಪಿ. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಗುಡ್ಡೆಹೊಸೂರಿನಿಂದ ಕುಶಾಲನಗರ ಗಣಪತಿ ದೇವಸ್ಥಾನದ ತನಕ ಬೈಕ್‍ನಲ್ಲಿ ಜಾಥಾ ಸಾಗಿ ಗುಡ್ಡೆಹೊಸೂರಿಗೆ ಹಿಂತುರಿಗಿದರು. ಈ ಸಂದರ್ಭ ಎಂ.ಆರ್. ಉತ್ತಪ್ಪ, ಜಿ.ಎಂ. ಮಣಿಕುಮಾರ್, ಜಿ.ಎಂ. ವಿಶುಕುಮಾರ್, ಕೆ.ಡಿ. ಗಿರೀಶ್, ಅಂಬಾಡಿ ರವಿ, ಚಂಗಪ್ಪ, ಎಂ.ಆರ್. ಮಾದಪ್ಪ, ಕೆ.ಕೆ. ಗಣೇಶ್, ಕೆ.ಆರ್. ನಿತ್ಯ, ಜಿ.ಎಂ. ಸಲಿ, ಗಣೇಶ್ ಗಾಣಿಗ, ನಂದ ಪೂಜಾರಿ, ಮಾದಪಟ್ಟಣದ ಪ್ರವೀಣ್, ಪ್ರಜ್ವಲ್, ಸುರೇಶ ಮತ್ತು ಮೋನಪ್ಪ ಪೂಜಾರಿ, ತಮ್ಮಯ್ಯ, ಪಂಚಾಯಿತಿ ಸದಸ್ಯೆ ಡಾಟಿ ಉಮೇಶ್, ಮುಳ್ಳುಸೋಗೆ ಮಹೇಂದ್ರ, ಬಿ.ಕೆ. ಮೋಹನ್, ಕಿರಣ್, ಮಧು ಮುಂತಾದವರು ಭಾಗವಹಿಸಿದ್ದರು.
ಚೆಟ್ಟಳ್ಳಿ: ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಯದಲ್ಲಿ ಬಲ್ಲಾರಂಡ ಮಣಿ ಉತ್ತಪ್ಪ ನೇತೃತ್ವದಲ್ಲಿ ಚೆಟ್ಟಳ್ಳಿ ಬಿಜೆಪಿ ಕಾರ್ಯಕರ್ತರು 7 ಗಂಟೆಗೆ ಸರಿಯಾಗಿ ವೀರಾಂನಜನೆ, ವಿಷ್ಣು ಹಾಗೂ ಗಣಪತಿಯ ದೇವರ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿದರು.
ವೀರಾಜಪೇಟೆ: ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರದಲ್ಲಿ ನರೇಂದ್ರ ಮೋದಿ ಅವರ ತಂಡ ಹಾಗೂ ಕೊಡಗು ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಪ್ರಚಂಡ ಗೆಲವು ಸಾಧಿಸಿದ ಪ್ರಯುಕ್ತ ವೀರಾಜಪೇಟೆ ಬಳಿಯ ಕೆ. ಬೊಯಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಅಲ್ಲಿನ ಕೆಂಕೇರಮ್ಮ ದೇವಾಲಯದಿಂದ ಕದನೂರಿನ ಊರುಮಂದ್‍ವರೆಗೆ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಬಿಜೆಪಿ ಪಕ್ಷದ ಮುಖಂಡರಾದ ಅಮ್ಮಣಿಚಂಡ ರಾಜಾ ನಂಜಪ್ಪ, ಮಲ್ಲಂಡ ಮಧು ದೇವಯ್ಯ, ಮಣಿ ನಂಜಪ್ಪ, ಕಾಣತಂಡ ಧನು ಬೋಪಣ್ಣ, ಶರಿ ಸೋಮಣ್ಣ, ಪಿ. ಮಿಟ್ಟು ಚಂಗಪ್ಪ, ವಾಣಿ ಅಯ್ಯಪ್ಪ, ರಮೇಶ್, ಕಾಣತಂಡ ರೋಶನ್, ಕೆ. ನವೀನ್, ಕುಂಬೇರ ಮನುಕುಮಾರ್, ಜೋಕಿಂ ರಾಡ್ರಿಗಾಸ್ ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.