ಚೆಟ್ಟಳ್ಳಿ, ಮೇ 31: ವೀರಾಜಪೇಟೆ ಸಮೀಪದ ಕರಡದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಂಬ್ರಾನ್ ಯೂತ್ ಫ್ರೆಂಡ್ಸ್ ಕ್ರಿಕೆಟರ್ಸ್ ಕರಡ ಇವರ ವತಿಯಿಂದ ನಡೆದ ಜಿಲ್ಲಾ ಮಟ್ಟದ ಸೂಪರ್ 9 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ವೀರಾಜಪೇಟೆ ತಂಡದ ಬ್ಲೂ ಸ್ಟಾರ್ ತಂಡವು ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.

ದ್ವಿತೀಯ ಸ್ಥಾನವನ್ನು ರಾಂಕಿಂಗ್ ಸ್ಟಾರ್ ಕುಂಜಿಲ, ತೃತೀಯ ಸ್ಥಾನವನ್ನು ಭಗವತಿ ಫ್ರೆಂಡ್ಸ್ ಕದನೂರು, ಹಾಗೂ ನಾಲ್ಕನೇ ಸ್ಥಾನವನ್ನು ಆದ್ಯ ಕ್ರಿಕೆಟರ್ಸ್ ಕರಡ ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ ಒಟ್ಟು 27 ತಂಡಗಳು ಭಾಗವಹಿಸಿದ್ದವು.

ಪಂದ್ಯಾಟದ ಶಿಸ್ತಿನ ತಂಡದ ಪ್ರಶಸ್ತಿಯನ್ನು ಬ್ಲೂ ಸ್ಟಾರ್ ತಿತಿಮತಿ, ಬೆಸ್ಟ್ ಬೌಲರ್ ಆದ್ಯ ಫ್ರೆಂಡ್ಸ್ ಕರಡ ತಂಡದ ಮಾಮು, ಹಾಗೂ ಬೆಸ್ಟ್ ಬ್ಯಾಟ್ಸ್ ಮೆನ್ ಪ್ರಶಸ್ತಿಯನ್ನು ಬ್ಲೂ ಸ್ಟಾರ್ ವೀರಾಜಪೇಟೆ ತಂಡದ ಅಜಯ್ ಪಡೆದುಕೊಂಡರು.ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ತಂಬ್ರಾನ್ ಯೂತ್ ಫ್ರೆಂಡ್ಸ್ ಅಧ್ಯಕ್ಷರಾದ ಧನಂಜಯ, ಸಂಜು, ಅಣ್ಣಪ್ಪ, ವರುಣ, ಲೋಕೇಶ್, ಮುದ್ದಪ್ಪ ಇದ್ದರು. ಕ್ರೀಡಾಕೂಟದ ವೀಕ್ಷಕ ವಿವರಣೆಯನ್ನು ಕಡಂಗದ ಹರ್ಷಾದ್ ಮಾಡಿದರು.