ಕೂಡಿಗೆ, ಜೂ, 1: ಕೂಡಿಗೆಯಿಂದ ಮಾದಲಾಪುರ ಕಡೆಗೆ ಹೋಗುತ್ತಿದ ಬೈಕ್ವೊಂದಕ್ಕೆ ಮಾದಲಾಪುರ ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಲಾರಿಯೊಂದು ಕೂಡಿಗೆ ಸಮೀಪದ ಕೂಡಿಗೆ-ಕೂಪ್ಪಲು ಗ್ರಾಮದ ಸೋಮವಾರಪೇಟೆ ಹೋಗುವ ರಸ್ತೆಯ ತಿರುವಿನಲ್ಲಿ ಡಿಕ್ಕಿಯಾಗಿದೆ. ಬೈಕ್ ಸವಾರ ಸೀಗೆಹೊಸೂರು ಗ್ರಾಮದ ರಾಜು ಎಂಬವರ ಕಾಲು ಮುರಿದಿದ್ದು, ಡಿಕ್ಕಿ ಹೊಡೆದ ನಂತರ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಬೈಕ್ ಸವಾರ ರಾಜು ಎಂಬವನನ್ನು ಸುಳ್ಯ ಆಸ್ಪತ್ರೆ ಚಿಕಿತ್ಸೆ ದಾಖಲಿಸಲಾಗಿದೆ.
ಗಾಯಾಳುವನ್ನು ಕುಶಾಲನಗರದಿಂದ ಸಮುದಾಯ ಆರೋಗ್ಯ ಕೇಂದ್ರದಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಸಾಗಿಸಲು 3 ಗಂಟೆಗಳ ಕಾಲಕಾದರೂ 108 ವಾಹನ ಸಿಗದಿದ್ದ ಕಾರಣ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು.