ಗೋಣಿಕೊಪ್ಪ ವರದಿ, ಜೂ. 1 ; ಹಾಕಿ ಇಂಡಿಯಾ ವತಿಯಿಂದ ಹರಿಯಾಣದ ಹಿಸ್ಸಾರ್‍ನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಸಬ್‍ಜೂನಿಯರ್ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡ 4 ನೇ ಪಂದ್ಯದಲ್ಲೂ ಸೋಲನುಭವಿಸಿದೆ. ಸ್ಪೋಟ್ರ್ಸ್ ಅಥಾರಿಟಿ ವಿರುದ್ದ ನಡೆದ ಪಂದ್ಯದಲ್ಲಿ 1-19 ಗೋಲುಗಳ ಅಂತರದಿಂದ ಸೋಲನುಭವಿಸಿತು. ಕೂರ್ಗ್ ಪರ 35ನೇ ನಿಮಿಷದಲ್ಲಿ ಜಾಹ್ನವಿ ಏಕೈಕ ಗೋಲು ಹೊಡೆದರು.