ಕೂಡಿಗೆ, ಮೇ 30: ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ವಯೋವೃದ್ಧರನ್ನು ಗೌರವಿಸುವ ಮೂಲಕ ಬದುಕಿನಲ್ಲಿ ಯಶಸ್ಸು ಕಾಣಬೇಕು. ಸಮಾಜದಲ್ಲಿ ತನ್ನ ದುಡಿಮೆಯ ಸ್ವಲ್ಪ ಭಾಗವನ್ನಾದರೂ ಈ ವಯೋವೃದ್ಧರ ಶ್ರೇಯೋಭಿವೃದ್ಧಿಗೆ ವಿನಿಯೋಗಿಸಿ ದಾಗ ಆತ್ಮತೃಪ್ತಿಯು ಸಿಗುತ್ತದೆ. ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹಿರಿಯರನ್ನು ಗೌರವಿಸಬೇಕು ಎಂದು ಕುಶಾಲನಗರ ವೃತ್ತನಿರೀಕ್ಷಕ ದಿನೇಶ್‍ಕುಮಾರ್ ಹೇಳಿದರು.
ಕೂಡಿಗೆಯ ಶ್ರೀಶಕ್ತಿ ವೃದ್ಧಾಶ್ರಮದಲ್ಲಿ ವೃದ್ಧರಿಗಾಗಿ ಮೈಸೂರಿನ ಸಪ್ತಸ್ವರ ಸಿಂಚನಾ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಮೈಸೂರಿನ ಸಪ್ತಸ್ವರ ಸಿಂಚನಾ ಟ್ರಸ್ಟ್‍ನ ಅಧ್ಯಕ್ಷ ಡಾ. ಮಂಜುನಾಥ್ ಅವರು ಸಾಂಸ್ಕøತಿಕ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ಭಾವನೆ ಗಳನ್ನು ಭಾವನಾತ್ಮಕ ಚಿಂತನೆ ಮೂಲಕ ವೈಚಾರಿಕತೆಯಲ್ಲಿ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳಬೇಕು ಎಂದರು. ಈ ಸಂದರ್ಭ ಟ್ರಸ್ಟ್‍ನ ಉಪಾಧ್ಯಕ್ಷ ದ್ವಾರಕನಾಥ್, ಕಾವೇರಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರ ಮೋಹನ್ ಮಾತನಾಡಿದರು.
ವೇದಿಕೆಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಅಪ್ಪಾಜಿ, ಕುಶಾಲನಗರ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಪ್ರಕಾಶ್, ಮೈಸೂರಿನ ವಕೀಲ ಆರಾಧ್ಯ, ಮೈಸೂರಿನ ಸಪ್ತಸ್ವರ ಸಿಂಚನಾ ಟ್ರಸ್ಟ್‍ನ ಪ್ರಮುಖರಾದ ಜಗದೀಶ್, ಮಂಜುನಾಥ್, ಹರೀಶ್, ಜಯ, ಆರ್.ಮಂಜುನಾಥ್, ಶ್ರೀಶಕ್ತಿ ವೃದ್ಧಾಶ್ರಮದ ವ್ಯವಸ್ಥಾಪಕ ಚಂದ್ರು ಸೇರಿದಂತೆ ಮತ್ತಿತರರು ಇದ್ದರು.
ಮೈಸೂರಿನ ಸಪ್ತಸ್ವರ ಸಿಂಚನಾ ಟ್ರಸ್ಟ್ ವತಿಯಿಂದ ವಯೋವೃದ್ಧರಿಗೆ ಮನೋಲ್ಲಾಸಪಡಿಸುವ ಉದ್ದೇಶ ದಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಿ, ವೃದ್ಧರು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕಾರ್ಯಕ್ರಮದ ಅಂಗವಾಗಿ ವೃದ್ಧಾಶ್ರಮದ ಸುತ್ತಲು ಕಾವೇರಿ ಸ್ವಚ್ಛತಾ ಆಂದೋಲನ ತಂಡದ ವತಿಯಿಂದ ಹಾಗೂ ಮೈಸೂರಿನ ಸಪ್ತಸ್ವರ ಸಿಂಚನಾ ಟ್ರಸ್ಟ್ ವತಿಯಿಂದ ಗಿಡಗಳನ್ನು ನೆಡಲಾಯಿತು.