vಮಡಿಕೇರಿ, ಮೇ 30: ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ ಜಲಪ್ರಳಯದಲ್ಲಿ ಸಂಕಷ್ಟಗೊಳಗಾದವರಿಗೆ ನೆರವು ನೀಡುವ ನಿಟ್ಟಿನಲ್ಲಿ ನಮ್ಮ ಕೊಡಗು ತಂಡವು ಪ್ರೇರಣೆ ಎಂಬ ಹೆಸರಿನ ಕಾರ್ಯಕ್ರಮವನ್ನು ಜೂನ್ 2 ರಂದು ಕುಶಾಲನಗರದಲ್ಲಿ ಹಮ್ಮಿಕೊಂಡಿದೆ. "ನಮ್ಮ ಕೊಡಗು ತಂಡ" "ವಿದ್ಯಾರ್ಥಿ ವೇತನ'' ಹಾಗೂ ಪ್ರವಾಹದಲ್ಲಿ ನಿರಾಶ್ರಿತರಾಗಿದ್ದು ಈಗಾಗಲೇ ಸಂಸ್ಥೆಗಳಿಂದ ಆಯ್ಕೆ ಮಾಡಲಾಗಿರುವ ಫಲಾನುಭವಿ ಕುಟುಂಬಗಳಿಗೆ "ಧನಸಹಾಯ" ನೀಡುವ ಕಾರ್ಯಕ್ರಮವನ್ನು ಜೂನ್ 2 ರಂದು ಬೆಳಿಗ್ಗೆ 10.30 ಗಂಟೆಗೆ ಕುಶಾಲನಗರದ "ಮಿನಿಸ್ಟರ್ ಕೋಟ್"ನಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಬೆಂಗಳೂರಿನ ಡಾ. ನಾಗಲಕ್ಷ್ಮಿಚೌಧರಿ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಅಮೇರಿಕಾದ ಕಾಟಿ ಪ್ರೀಮಿಯರ್ ಲೀಗ್ನ ಅವಿನಾಶ್ ಬಸವರಾಜು, ಎಸ್.ಎಲ್.ಎನ್. ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಎನ್. ವಿಶ್ವನಾಥ್, ಕೊಡಗು ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.