ಒಡೆಯನಪುರ, ಮೇ 30: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಗ್ರಾಮೋದ್ಯೋಗ ವತಿಯಿಂದ ಶನಿವಾರಸಂತೆಯಲ್ಲಿ ಕಳೆದ 1 ವಾರದಿಂದ ಸಿರಿ ಉತ್ಪನ್ನ, ಸಿರಿ ಸಿದ್ಧ ಉಡುಪುಗಳ ಮಾರಾಟ ಹಾಗೂ ವಸ್ತು ಪ್ರದರ್ಶನಗಳ ಮೇಳ ನಡೆಯುತ್ತಿದ್ದು ಸ್ವದೇಶಿ ಪ್ರಿಯ ಗ್ರಾಹಕರು ಸ್ವದೇಶಿಯ ಸಿದ್ದ ಉಡುಪು ಮತ್ತು ಸಿರಿ ಉತ್ಪನ್ನ ಮತ್ತು ಸಿರಿ ಧಾನ್ಯಗಳನ್ನು ಮಾರಾಟ ಮಳಿಗೆಗೆ ಬಂದು ಕೊಂಡು ಕೊಳ್ಳುತ್ತಿದ್ದಾರೆ ಇದರಿಂದ ಸಿರಿ ಹಬ್ಬದ ರಂಗು ಮೇಲೇರುತ್ತಿದೆ.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸಿರಿ ಉತ್ಪನ್ನಗಳನ್ನು ಮತ್ತು ಸ್ವದೇಶಿ ಉಡುಪುಗಳನ್ನು ಮಾರಾಟ ಮಾಡುವದರ ಮೂಲಕ ಈ ಭಾಗ ಹಾಗೂ ಸುತ್ತುಮುತ್ತಲಿನ ಜನರಿಗೆ ಸ್ವದೇಶಿ ವಸ್ತುಗಳ ಬಗ್ಗೆ ಪರಿಚಯ ಮಾಡುತ್ತಿರುವ ಕಾರ್ಯ ಶ್ಲಾಘನಿಯ ವಾಗಿದೆ ಎಂದರು. ಸಿರಿ ಉತ್ಪನ್ನಗಳನ್ನು ಸಿರಿಹಬ್ಬದ ಮೂಲಕ ವಾಗಿ ಮಾರಾಟ ಮಾಡುವದರಿಂದ ಜನ ಸಾಮಾನ್ಯರಿಗೆ ಸ್ವದೇಶಿ ವಸ್ತುಗಳ ಬಗ್ಗೆ ಮನವರಿಕೆ ಯಾಗುತ್ತದೆ ಇದರಿಂದ ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಾಗು ವದರ ಜೊತೆಯಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆ ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ ಎಂದರು.
ರೋಟರಿ ಸಂಸ್ಥೆ ಕಾರ್ಯದರ್ಶಿ ಎ.ಡಿ. ಮೋಹನ್ಕುಮಾರ್ ಮಾತನಾಡಿ, ಸ್ವದೇಶಿ ಉಡುಪುಗಳನ್ನು ಧರಿಸುವದರಿಂದ ಆರೋಗ್ಯವೂ ಉತ್ತಮಗೊಳ್ಳುತ್ತದೆ ಈ ನಿಟ್ಟಿನಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆ ಸ್ವದೇಶಿಯ ಸಿದ್ದ ಉಡುಪುಗಳನ್ನು ಮಾರಾಟ ಮಾಡುತ್ತಿರುವದ್ದರಿಂದ ಸ್ವದೇಶಿ ಉಡುಪುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಂತ ಕಾರ್ಯ ಮಾಡುತ್ತಿದೆ ಎಂದರು. ಸಿರಿ ಉತ್ಪನ್ನ ಮತ್ತು ಸಿರಿ ಧಾನ್ಯಗಳ ಸೇವನೆಯಿಂದ ಆರೋಗ್ಯವೂ ಅಭಿವೃದ್ಧಿ ಹೊಂದುತ್ತದೆ, ಸಿರಿ ಧಾನ್ಯದಲ್ಲಿ ಮಧುಮೇಹ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ ಈ ದಿಸೆಯಲ್ಲಿ ಗ್ರಾಮಾಭಿವೃದ್ಧಿ ಸಂಸ್ಥೆ ಸಿರಿ ಧಾನ್ಯ ಮತ್ತು ಸಿರಿ ಉತ್ಪನ್ನಗಳನ್ನು ಕೊಳ್ಳಲು ಜನರಿಗೆ ಜಾಗೃತಿ ಮೂಡಿಸುತ್ತಿ ರುವದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿರಿ ಉತ್ಪನ್ನ ಮತ್ತು ಸಿರಿ ಸಿದ್ಧ ಉಡುಪು ಮಾರಾಟ ಮಳಿಗೆ ವ್ಯವಸ್ಥಾಪಕರುಗಳಾದ ನಿತಿನ್, ಅಜಿತ್ ಸೇವಾ ನಿರತ ಎಸ್.ಆರ್. ಶೋಭಾವತಿ ಮುಂತಾದವರು ಹಾಜರಿದ್ದರು
-ವಿ.ಸಿ.ಸುರೇಶ್ ಒಡೆಯನಪುರ