ಮಡಿಕೇರಿ, ಮೇ 30: ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆಯಿಂದ ಆಯೋಜಿಸಲಾದ ನೃತ್ಯ ಸ್ಪರ್ಧೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಸ್ಪರ್ಧೆಗೆ ಜಿಲ್ಲೆಯ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಬ್ ಜೂನಿಯರ್ ಸ್ಪರ್ಧೆಯಲ್ಲಿ ಹಿಮಶ್ರಿ ಪ್ರಥಮ, ಜ್ಯೋತಿಶ್ರೀ ದ್ವಿತೀಯ ಹಾಗೂ ವಿಸ್ಮಯ ತೃತೀಯ ಸ್ಥಾನಗಳಿಸಿದರು. ಜೂನಿಯರ್ ವಿಭಾಗದಲ್ಲಿ ಆರುಶಿ ಪ್ರಥಮ, ಮನಶ್ರೀ ದ್ವಿತೀಯ ಹಾಗೂ ಮಧುಮಿತ ತೃತೀಯ ಸ್ಥಾನ ಗಳಿಸಿದರು. ತೀರ್ಪುಗಾರರಾಗಿ ಭರತನಾಟ್ಯ ಗುರುಗಳಾದ ಭಾರತಿ ರಮೇಶ್ ಹಾಗೂ ಮಂಗಳೂರಿನ ನಿಶಾಂತ್ ದೇವಾಡಿಗ ಕಾರ್ಯನಿರ್ವಹಿಸಿದರು. ಕಿಂಗ್ಸ್ ಆಫ್ ಕೂರ್ಗ್ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ನೀಡಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು.