ಮಡಿಕೇರಿ, ಮೇ 30: ವೀರಾಜಪೇಟೆ ತಾಲೂಕು ಅಮ್ಮತ್ತಿನಾಡು ಕಂದಾಯ ಇಲಾಖೆಯ ಉಪ ತಹಶೀಲ್ದಾರರಾಗಿ ಹೆಚ್.ಕೆ. ಪೊನ್ನು ಅವರಿಗೆ ಸರಕಾರ ಬಡ್ತಿ ನೀಡಿ ನೇಮಿಸಿದೆ.

ಪ್ರಸ್ತುತ ಜಿಲ್ಲಾ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಳೆದ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಪೊನ್ನು ಅವರು ಈ ಹಿಂದೆ ವೀರಾಜಪೇಟೆ, ಸೋಮವಾರಪೇಟೆ ಮತ್ತು ಮಡಿಕೇರಿಯ ತಹಶೀಲ್ದಾರ್ ಕಚೇರಿಯಲ್ಲಿ ಶಿರಸ್ತೇದಾರರಾಗಿ ಸೇವೆ ಸಲ್ಲಿಸಿದ್ದರು.

ಪೊನ್ನು ತಾ. 31ರಂದು (ಇಂದು) ಅಮ್ಮತ್ತಿ ನಾಡಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.