ಮಡಿಕೇರಿ, ಮೇ 30: ಕಳೆದ ಮಳೆಗಾಲದಲ್ಲಿ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪ ಸಂದರ್ಭ ಮನೆ - ಮಠಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗೆ ಆರಂಭಿಸಲಾಗಿದ್ದ ಪರಿಹಾರ ಕೇಂದ್ರಗಳನ್ನು ಎಲ್ಲರೂ ತೊರೆಯುವದರೊಂದಿಗೆ, ನೆಲೆ ಕಳೆದುಕೊಂಡಿದ್ದವರು ಬಾಡಿಗೆ ಮನೆಗಳಿಗೆ ತೆರಳಿದ್ದರೂ, ಕೊಡಗಿನ ಗಡಿ ಕಲ್ಲುಗುಂಡಿ - ಸಂಪಾಜೆ ಸರಕಾರಿ ಶಾಲೆಯಲ್ಲಿ ಇನ್ನೂ 5 ಕುಟುಂಬಗಳು ಉಳಿದುಕೊಂಡಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.ಮಳೆಗಾಲ ಮುಗಿಯುತ್ತಿ ದ್ದಂತೆಯೇ ಕಳೆದ ಅಕ್ಟೋಬರ್ ನಿಂದ ಕರ್ನಾಟಕ ರಾಜ್ಯ ಸರಕಾರ ಕೇಂದ್ರದ ಅನುದಾನದೊಂದಿಗೆ; ಸಂತ್ರಸ್ತ ಕುಟುಂಬಗಳಿಗೆ ತಲಾ ರೂ. 1 ಲಕ್ಷದ 1 ಸಾವಿರದ 800 ರೂ. ಹಣ, ಪೀಠೋಪರಣ ಇತ್ಯಾದಿಗೆ ರೂ. 50 ಸಾವಿರ, ದಿನಸಿ ಪದಾರ್ಥ ಗಳೊಂದಿಗೆ ರೂ. 3,800 ಆರ್ಥಿಕ ನೆರವು ಒದಗಿಸಿತ್ತು.
(ಮೊದಲ ಪುಟದಿಂದ) ಅಲ್ಲದೆ, ಮಾಸಿಕ ರೂ. 10 ಸಾವಿರದಂತೆ ಬಾಡಿಗೆ ಮನೆ ಬಾಬ್ತು ನೆರವು ಕೂಡ ಸಂಬಂಧಪಟ್ಟವರ ಖಾತೆಗಳಿಗೆ ಜಮೆಗೊಳಿಸುತ್ತಾ ಬಂದಿದೆ. ಹೀಗಿದ್ದರೂ ಕೂಡ ಮದೆ ಗ್ರಾ.ಪಂ. ವ್ಯಾಪ್ತಿಯ ಜೋಡುಪಾಲ ದವರೆನ್ನಲಾದ ನಾಲ್ಕು ಕುಟುಂಬ ಗಳು ಹಾಗೂ 2ನೇ ಮೊಣ್ಣಂಗೇರಿಯ ಒಂದು (ಮೊದಲ ಪುಟದಿಂದ) ಅಲ್ಲದೆ, ಮಾಸಿಕ ರೂ. 10 ಸಾವಿರದಂತೆ ಬಾಡಿಗೆ ಮನೆ ಬಾಬ್ತು ನೆರವು ಕೂಡ ಸಂಬಂಧಪಟ್ಟವರ ಖಾತೆಗಳಿಗೆ ಜಮೆಗೊಳಿಸುತ್ತಾ ಬಂದಿದೆ. ಹೀಗಿದ್ದರೂ ಕೂಡ ಮದೆ ಗ್ರಾ.ಪಂ. ವ್ಯಾಪ್ತಿಯ ಜೋಡುಪಾಲ ದವರೆನ್ನಲಾದ ನಾಲ್ಕು ಕುಟುಂಬ ಗಳು ಹಾಗೂ 2ನೇ ಮೊಣ್ಣಂಗೇರಿಯ ಒಂದು (ಮೊದಲ ಪುಟದಿಂದ) ಅಲ್ಲದೆ, ಮಾಸಿಕ ರೂ. 10 ಸಾವಿರದಂತೆ ಬಾಡಿಗೆ ಮನೆ ಬಾಬ್ತು ನೆರವು ಕೂಡ ಸಂಬಂಧಪಟ್ಟವರ ಖಾತೆಗಳಿಗೆ ಜಮೆಗೊಳಿಸುತ್ತಾ ಬಂದಿದೆ. ಹೀಗಿದ್ದರೂ ಕೂಡ ಮದೆ ಗ್ರಾ.ಪಂ. ವ್ಯಾಪ್ತಿಯ ಜೋಡುಪಾಲ ದವರೆನ್ನಲಾದ ನಾಲ್ಕು ಕುಟುಂಬ ಗಳು ಹಾಗೂ 2ನೇ ಮೊಣ್ಣಂಗೇರಿಯ ಒಂದು ಕೊಠಡಿಯನ್ನೇ ವಸತಿಯಾಗಿ ಪರಿವರ್ತಿಸಿಕೊಂಡಿದ್ದಾರೆ. ಈ ಸಂತ್ರಸ್ತ ಕುಟುಂಬಗಳನ್ನು ‘ಶಕ್ತಿ’ ಅಭಿಪ್ರಾಯ ಬಯಸಿದಾಗ, ಮದೆ ಗ್ರಾ.ಪಂ. ವ್ಯಾಪ್ತಿಯ ಗೋಳಿಕಟ್ಟೆಯಲ್ಲಿ ಪರ್ಯಾಯ ಮನೆಗಳನ್ನು ಕೊಡಲಿದ್ದು, ಆ ಮನೆಗಳಿಗೆ ತೆರಳುವದಾಗಿ ಪ್ರತಿಕ್ರಿಯಿಸಿದ್ದಾರೆ. ಸರಕಾರದ ನೆರವಿನ ಬಾಡಿಗೆಯಲ್ಲಿ ತಾವು ಬೇಕಾದ ಸಾಮಾನುಗಳನ್ನ ಖರೀದಿಸಿಕೊಂಡು ಶಾಲೆಯಲ್ಲಿ ಅಡುಗೆ ಇತ್ಯಾದಿ ತಯಾರಿಸಿ ಕೊಳ್ಳುತ್ತಿರುವದಾಗಿ ನುಡಿಯುತ್ತಾರೆ.
ಹಗಲು ವೇಳೆ ಕೆಲವರು ಬೇರೆ ಕಡೆಗಳಲ್ಲಿ ಕೆಲಸ ಇತ್ಯಾದಿಗೆ ತೆರಳಿದರೂ, ರಾತ್ರಿ ಬಂದು ಶಾಲೆಯಲ್ಲೇ ತಂಗುತ್ತಿದ್ದು, ಶೈಕ್ಷಣಿಕ ಚಟುವಟಿಕೆಗೆ ಭಂಗ ಉಂಟಾಗುತ್ತಿದೆ ಎಂದು ಮಕ್ಕಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಳ್ಯ ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶದಂತೆ ಕೊಡಿಯಾಲ ಗ್ರಾ.ಪಂ. ಕಾರ್ಯ ದರ್ಶಿ ಅವಿನಾಶ್ ಅವರು, ಕಳೆದ ಆಗಸ್ಟ್‍ನಿಂದ ಇದುವರೆಗೂ ಈ ಕೇಂದ್ರದ ಉಸ್ತುವಾರಿಯೊಂದಿಗೆ ಎಲ್ಲವನ್ನು ನೋಡಿಕೊಂಡು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಈ ಸಂತ್ರಸ್ತರನ್ನು ಶಾಲೆಯಿಂದ ಸ್ಥಳಾಂತರಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಯಾಗದಂತೆ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕೆಂದು ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರು ಒತ್ತಾಯಿಸಿದ್ದಾರೆ. ಶಿಕ್ಷಕ ವೃಂದ ಮಾತ್ರ ಪರಿಸ್ಥಿತಿಗೆ ಹೊಣೆಯಾರು? ಎಂಬ ಪ್ರಶ್ನೆಯೊಂದಿಗೆ ಅಸಹಾಯಕ ನೋಟ ಬೀರುತ್ತಾ, ಮಕ್ಕಳ ಭವಿಷ್ಯದೆಡೆಗೆ ಚಿಂತಿಸುತ್ತಿದ್ದಾರೆ.