ಚೆಟ್ಟಳ್ಳಿ, ಮೇ 30: ಚಲನ ಚಿತ್ರರಂಗದಲ್ಲಿ ಹೆಸರು ಗಳಿಸುತ್ತಿರುವ ಕೊಡಗಿನ ಕೊಟ್ಟ್‍ಕತ್ತಿರ ಪ್ರಕಾಶ್ ನಿರ್ದೇಶಿಸಿ ನಟಿಸಿರುವ ಮಕ್ಕಳ ತೀರ್ಪು ಚಲನಚಿತ್ರವು ತೆರೆಕಾಣಲು ಸಿದ್ದವಾಗಿದೆ.
ಕೊಡಗಿನ ಚೇರಂಬಾಣೆ ಯವರಾದ ಕೊಟ್ಟ್‍ಕತ್ತಿರ ಪ್ರಕಾಶ್ ಬೆಂಗಳೂರಿನಲ್ಲಿ ಉದ್ಯಮಿ ಹಾಗೂ ಚಲನಚಿತ್ರರಂಗದಲ್ಲಿ ಹೆಸರುಗಳಿಸಿ ಹÀಲವು ಚಿತ್ರಗಳನ್ನ್ಲು ನಿರ್ದೇಶಿಸಿ ನಟಿಸಿದ್ದಾರೆ.
ಆಧುನಿಕ ಬದುಕಿನಲ್ಲಿ ವಯೋವೃದ್ಧ ತಂದೆ-ತಾಯಿಯರ ಆಸ್ತಿ-ಪಾಸ್ತಿ ಮನೆ ಮಠವನ್ನೆಲ್ಲ ಅನುಭವಿಸಿ ಬೀದಿಯಲ್ಲಿ ಬಿಟ್ಟು ಅನಾಥರಾಗಿಸಿದಾಗ ಬದುಕಿನ ಜಂಜಾಟದಲ್ಲಿದ್ದ ವೃದ್ಧ ತಂದೆ-ತಾಯಿಯನ್ನು ಕಂಡ ಶಾಲಾ ಮಕ್ಕಳು ಅನಾಥ ಆಶ್ರಮಕ್ಕೆ ಸೇರಿಸಿ ಅವರಿಗೆ ಬೇಕಾದ ವೈದಕೀಯ ವ್ಯವಸ್ಥೆಯನ್ನು ಮಾಡುತ್ತಾರೆ. ವಯೋವೃದ್ಧರನ್ನು ಬೀದಿಗೆ ಬಿಟ್ಟವರಿಗೆ ತಕ್ಕ ಪಾಠ ಕಲಿಸಲು ಪೊಲೀಸ್ ಹಾಗೂ ಕೋರ್ಟು ಮೆಟ್ಟಿಲೇರುವ ಮಕ್ಕಳಿಗೆ ಯಾರು ಸಹಾಯ ಮಾಡುವದಿಲ್ಲ. ಒಂದು ದಿನ ಮಕ್ಕಳು ದೈರ್ಯ ಮಾಡಿ ನ್ಯಾಯಾಧೀಶರ ಮನೆಗೆ ಹೋಗಿ ವಯೋವೃದ್ಧರ ಗೋಳಿನ ಕಥೆಯನ್ನು ಹೇಳುತ್ತಾರೆ. ಮುದ್ದು ಮಕ್ಕಳ ಈ ಹೋರಾಟಕ್ಕೆ ನ್ಯಾಯಾಧೀಶರ ಮನಕರಗಿ ನ್ಯಾಯಾಧೀಶ ಸ್ಥಾನಕ್ಕೆ ರಾಜೀನಾಮೆ ನೀಡಿ ವಕೀಲರಾಗಿ ಕೋರ್ಟಿನಲ್ಲಿ ದಾವೆ ಹೂಡಿ ವಯೋವೃದ್ಧ ತಂದೆ-ತಾಯಿಯರ ಪರ ವಾದಿಸಿ ನ್ಯಾಯ ಒದÀಗಿಸಿ ತಂದೆ-ತಾಯಿಯರನ್ನು ಮೂಲೆಗುಂಪು ಮಾಡಿದ ಮಕ್ಕಳಿಗೆ ಶಿಕ್ಷೆ ಕೊಡಿಸುವ ಕಥೆಯನ್ನು ಈ ಚಿತ್ರದಲ್ಲಿ ಎಣೆಯಲಾಗಿದೆ.
ಬಾಲಾಜಿ ಚಿತ್ರಾಲಯ ಅರ್ಪಿಸುವ ಎನ್.ಟಿ. ಜಯರಾಮ ರೆಡ್ಡಿಯವರ ಕಥೆ-ಸಂಭಾಷಣೆ-ನಿರ್ಮಾಣದ, ಶೇಖರ್ ಛಾಯಾಗ್ರಹಣ, ಮುತ್ತುರಾಜ್.ಟಿ ಸಂಕಲನ, ಶಿವಸತ್ಯ ಸಂಗೀತ ನಿರ್ದೇಶಿಸಿದ ಮಕ್ಕಳ ತೀರ್ಪು ಚಲನಚಿತ್ರದಲ್ಲಿ ಕೊಟ್ಟ್‍ಕತ್ತಿರ ಪ್ರಕಾಶ್ ನ್ಯಾಯಾಧೀಶರಾಗಿ ನಂತರ ಮಕ್ಕಳಿಗೆ ವಕೀಲರಾಗಿ ವಾದಿಸಿ ಗೆÉಲವನ್ನು ಸಾಧಿಸುವ ಪಾತ್ರವನ್ನು ನಿರ್ವಹಿಸಿದ್ದಾರೆ. ಸುಮಾರು ರೂ. 25 ಲಕ್ಷಗಳ ವೆಚ್ಚ ತಗುಲಿರುವ ಈ ಚಲನಚಿತ್ರದಲ್ಲಿ ಕೊಡಗಿನ ತೇಲಪಂಡ ಪವನ್ ತಮ್ಮಯ್ಯ ಮಗಳು ಯಶಿ ತಮ್ಮಯ್ಯ, ಮಂಡಿರ ಪದ್ಮ, ನೆಲ್ಲಚಂಡ ರೇಖಾ ನಾಣಯ್ಯ, ಡ್ರಾಮ ಜೂನಿಯರ್ ಬೇಬಿ ಅನ್ಸಿಕ ಹಾಗೂ ಹಲವು ಮಕ್ಕಳು ನಟಿಸಿದ್ದಾರೆ. ಕೊಟ್ಟ್‍ಕತ್ತಿರ ಪ್ರಕಾಶ್ ಅವರ ಕೂರ್ಗ್ ಕಾಫಿ ಉಡ್ ಮೂವಿಸ್‍ನಲ್ಲಿ ಕೊಡಗಿನ ಸಿಪಾಯಿ ಎಂಬ ಕಾದಂಬರಿ ಆಧಾರಿತ ಕೊಡವ ಚಲನಚಿತ್ರ ಅತೀ ಶೀಘ್ರದಲ್ಲಿ ತೆರೆಗೆ ಬರಲಿದ್ದು, ಪತ್ನಿ ಕೊಟ್ಟ್‍ಕತ್ತಿರ ಯಶೋಧ ಪ್ರಕಾಶ್ ಅವರ ಸ್ವಸ್ತಿಕ್ ಎಂಟರ್‍ಟೈನ್‍ಮೆಂಟ್‍ನಲ್ಲಿ ತೆರೆಕಂಡ ಸ್ಮಶಾನಮೌನ ಚಲನಚಿತ್ರಕ್ಕೆ ಕರ್ನಾಟಕ ಕಲೆ ಮತ್ತು ಸಾಧನೆ ಅಕಾಡೆಮಿಯ ಡಾ.ಅಂಬರೀಶ್ ಪ್ರಶಸ್ತಿ ಹಾಗೂ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಲಭಿಸಿದೆ.
-ಪುತ್ತರಿರ ಕರುಣ್ ಕಾಳಯ್ಯ