ಕುಶಾಲನಗರ, ಮೇ 29: ನ್ಯಾಯವಾದಿ ಸಂಜೀವ ಪುನಾಳೆಕರ ಅವರ ಬಂಧನವನ್ನು ಖಂಡಿಸಿರುವ ಕುಶಾಲನಗರದ ಹಿಂದೂ ಜನಜಾಗೃತಿ ಸಮಿತಿ ಕೂಡಲೇ ಅವರನ್ನು ಬಂಧಮುಕ್ತಗೊಳಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದೆ.
ಸಂಜೀವ ಪುನಾಳೆಕರ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ವಿಕ್ರಮ ಭಾವೆ ಅವರನ್ನು ಡಾ. ನರೇಂದ್ರ ದಾಭೋಲಕರ ಅವರ ಹತ್ಯೆ ಪ್ರಕರಣದಲ್ಲಿ ಶಂಕಿತರಾಗಿಸಿ ಸಿಬಿಐ ಬಂಧಿಸಿರುವದು ಖಂಡನೀಯ. ಕೂಡಲೇ ಅವರನ್ನು ಬಿಡುಗಡೆಗೊಳಿಸುವಂತೆ ಕೋರಿ ಹಿಂದೂ ಜನಜಾಗೃತಿ ಸಮಿತಿ ಪ್ರಮುಖರಾದ ಅಮೃತ್‍ರಾಜ್, ಸುಮನ್, ಕೇಂದ್ರೀಯ ಗೃಹ ಸಚಿವರು, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಕಂದಾಯ ಅಧಿಕಾರಿ ನಂದಕುಮಾರ್ ಅವರ ಮೂಲಕ ಮನವಿ ಸಲ್ಲಿಸಿದರು. ಸಮಿತಿ ಪ್ರಮುಖರಾದ ಶ್ರೀನಾಥ್, ಉಮಾ, ಡಾ. ವಿನಯ್ ಕುಮಾರ್, ನವನೀತ್, ಪ್ರಸನ್ನ ಮತ್ತಿತರರು ಇದ್ದರು.