ಗೋಣಿಕೊಪ್ಪ ವರದಿ, ಮೇ 28: ಹಾಕಿ ಇಂಡಿಯಾ ವತಿಯಿಂದ ಹರಿಯಾಣದ ಹಿಸ್ಸಾರ್‍ನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಸಬ್ ಜೂನಿಯರ್ ಬಾಲಕಿಯರ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಕಿ ಕೂರ್ಗ್ ತಂಡ ಸೋಲು ಅನುಭವಿಸಿದೆ. ಉತ್ತರ ಪ್ರದೇಶದ ವಿರುದ್ದ 2-3 ಗೋಲುಗಳ ವೀರೋಚಿತ ಸೋಲು ಅನುಭವಿಸಿತು. ಹಾಕಿ ಕೂರ್ಗ್ ಪರ ಜಾಹ್ನವಿ 2 ಗೋಲು ಹೊಡೆದು ಮಿಂಚಿದರು. ದ್ವಿತೀಯ ಪಂದ್ಯ ಬುಧವಾರ ನಡೆಯಲಿದ್ದು ಜಾರ್ಖಂಡ್ ತಂಡವನ್ನು ಎದುರಿಸಲಿದೆ.