ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಬಂಧ ನೈಜ ಸಂತ್ರಸ್ತರಿಗೆ ರೂ. 89 ಕೋಟಿ ಪರಿಹಾರ ನೀಡಲಾಗಿದೆ. ಇನ್ನು ಕೂಡ ಪರಿಹಾರ ಕಲ್ಪಿಸಲು ಹಣದ ಕೊರತೆ ಇಲ್ಲವೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಸೂಕ್ತ ಸ್ಪಂದನೆ ಲಭಿಸಿರುವದಾಗಿ ‘ಶಕ್ತಿ’ಯೊಂದಿಗೆ ನುಡಿದರಲ್ಲದೆ, ಪ್ರಸಕ್ತ ಮಳೆಗಾಲ ಎದುರಿಸಲು ಈಗಾಗಲೇ ಆಗಮಿಸಿರುವ ಎನ್‍ಡಿಆರ್‍ಎಫ್ ತಂಡ ಕೂಡ ಮುಂದಿನ ಮೂರು ತಿಂಗಳು ಜಿಲ್ಲೆಯಲ್ಲೇ ಮೊಕ್ಕಾಂ ಇರಲಿದೆ ಎಂದು ನೆನಪಿಸಿದರು. ಜಿಲ್ಲಾಡಳಿತವು ಎಲ್ಲಾ ರೀತಿ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು, ಜಿಲ್ಲೆಯ ಎಲ್ಲಾ ಇಲಾಖೆಗಳು, ಸರಕಾರಿ ಸಾಮ್ಯದ
ಹಣದ ಕೊರತೆ ಇಲ್ಲ : ಡಿಸಿ
(ಮೊದಲ ಪುಟದಿಂದ) ಸಂಸ್ಥೆಗಳು, ಇತರ ಸಂಘಸಂಸ್ಥೆಗಳು ಯಾವದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಿರುವದಾಗಿ ಮಾರ್ನುಡಿದರು. ಅಲ್ಲದೆ ತುರ್ತು ಕೆಲಸಗಳಿಗೆ ಅಗತ್ಯ ಹಣವಿದ್ದು, ಅಗತ್ಯವೆನಿಸಿದರೆ, ಉಭಯ ಸರಕಾರಗಳಿಂದ ಹೆಚ್ಚಿನ ನೆರವಿನ ಭರವಸೆ ಜಿಲ್ಲಾಡಳಿತಕ್ಕೆ ಲಭಿಸಿರುವದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.