ಶ್ರೀಮಂಗಲ, ಮೇ 29: ಟಿ. ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ 30 ವಿದ್ಯಾರ್ಥಿಗಳು 2018-19ರ ಶೈಕ್ಷಣಿಕ ಸಾಲಿನ ಹತ್ತನೇ ತರಗತಿಯ ಪರೀಕ್ಷೆ ಬರೆದಿದ್ದು ಫಲಿತಾಂಶ ಬಂದಾಗ 29 ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿರುವದಾಗಿ ಮಾಹಿತಿ ಬಂದಿತ್ತು.

ಉತ್ತಮವಾಗಿ ಪರೀಕ್ಷೆ ಬರೆದಿರುವ ನಂಬಿಕೆ ಹೊಂದಿದ್ದ ವಿದ್ಯಾರ್ಥಿ ಬಿ.ಎಂ. ಕಾರ್ತಿಕ್ ಅಯ್ಯಪ್ಪ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಇದೀಗ ಮರು ಮೌಲ್ಯಮಾಪನದ ನಂತರ ಕಡಿಮೆ ಅಂಕ ಬಂದಿದ್ದ ಸಮಾಜ ವಿಷಯದಲ್ಲಿ ಪೂರ್ಣ ಅಂಕ ಪಡೆದು ತೇರ್ಗಡೆ ಹೊಂದಿದ್ದಾನೆ.

ಈ ಫಲಿತಾಂಶದಿಂದ ರೂಟ್ಸ್ ವಿದ್ಯಾ ಸಂಸ್ಥೆಯಿಂದ ಹತ್ತನೇ ತರಗತಿಯ ಪರೀಕ್ಷೆ ಬರೆದ ಎಲ್ಲಾ 30 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಶಾಲೆಗೆ ಶೇ. 100 ರ ಫಲಿತಾಂಶ ಲಭಿಸಿದೆ.