ಕೂಡಿಗೆ, ಮೇ 29: ಕೂಡಿಗೆ ಗ್ರಾ.ಪಂ. ಯ ಒಂದನೇ ವಾರ್ಡಿನ ಉಪಚುನಾವಣೆ ಪ್ರಕ್ರಿಯೆ ಬುಧವಾರ ನಡೆಯಿತು.

ಒಂದನೇ ವಾರ್ಡಿನ ಸದಸ್ಯರು ಮರಣ ಹೊಂದಿದ ಹಿನೆÀ್ನಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆಯಿತು. ಚುನಾವಣೆಯಲ್ಲಿ ಮೂರು ಜನ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಬಿರುಸಿನ ಪ್ರಚಾರದೊಂದಿಗೆ ಚುನಾವಣಾ ಪ್ರಕ್ರಿಯೆ ನಡೆಯಿತು.

ಅಭ್ಯರ್ಥಿಗಳಾದ ಅಣ್ಣಯ್ಯ, ಹರೀಶ್, ಕೃಷ್ಣರವರು ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಈ ಸಂದರ್ಭ ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್, ಜಿ.ಪಂ ಸದಸ್ಯೆ ಕೆ.ಆರ್. ಮಂಜುಳಾ, ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಹಾಗೂ ಜನತಾ ದಳ ಪಕ್ಷದ ಪ್ರಮುಖರುಗಳು ಹಾಗೂ ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ಕಂಡು ಬಂದರು. ಶೇ.70ರಷ್ಟು ಮತದಾನವಾಗಿದ್ದು, ಚುನಾವಣೆಯು ಬೆಳಿಗ್ಗೆ 7 ರಿಂದ ಸಂಜೆ 5ರ ತನಕ ನಡೆಯಿತು. ಯಾವದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು. ಮತ ಎಣಿಕೆಯು ತಾ. 31.ರಂದು ನಡೆಯಲಿದೆ.