ಸುಂಟಿಕೊಪ್ಪ, ಮೇ 29: ಇಲ್ಲಿನ ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್‍ಬಾಲ್ ಟೂರ್ನಿಯ ಬುಧವಾರ ನಡೆದ ಪಂದ್ಯದಲ್ಲಿ ಗದ್ದೆಹಳ್ಳ, ಮತ್ತು ನಂಜನಗೂಡು ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿತು.
ಆರಂಭದಿಂದಲೂ ರಭಸದ ಮತ್ತು ಹೊಂದಾಣಿಕೆಯ ಆಟವನ್ನು ಪ್ರದರ್ಶಿಸಿದ ಗದ್ದೆಹಳ್ಳ ತಂಡವು ಕೊಡಗರಹಳ್ಳಿ ತಂಡದ ಆಟಗಾರರನ್ನು ವಂಚಿಸಿ ಗೋಲು ಹೊಡೆಯಲು ಯತ್ನಿಸುತ್ತಿರುವಾಗಲೇ ಪಂದ್ಯದ 5ನೇ ನಿಮಿಷದಲ್ಲಿಯೇ ಗದ್ದೆಹಳ್ಳ ತಂಡದ ಮುನ್ನಡೆ ಆಟಗಾರ ರೆಹಮನ್ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಗೋಲು ಪಟ್ಟಿಯಲ್ಲಿ ಸೇರಿಸುವರೊಂದಿಗೆ 1-0 ಗೋಲುಗಳ ಮುನ್ನಡೆ ಒದಗಿಸಿಕೊಟ್ಟರು. ಇದರಿಂದ ತಪ್ಪಿನ ಅರಿವಾದ ಕೊಡಗರಹಳ್ಳಿ ತಂಡವು ಎಚ್ಚೆತ್ತುಕೊಂಡು ಹೊಂದಾಣಿಕೆಯ ಆಟದತ್ತ ಒತ್ತು ನೀಡಿತು. ಆದರೆ 2 ತಂಡಗಳ ಸಮಬಲದ ಹೋರಾಟದಲ್ಲಿ ಯಾವದೇ ಪಲಿತಾಂಶ ಹೊರಬರಲಿಲ್ಲ.
ದ್ವಿತೀಯಾÀರ್ಧದಲ್ಲೂ ಮಿಂಚಿನ ಆಟಕ್ಕೆ ಒತ್ತು ನೀಡಿದ 2 ತಂಡಗಳು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದವು. 2 ತಂಡಗಳಿಗೂ ಗೋಲು ಗಳಿಸುವ ಅವಕಾಶವಿದ್ದರೂ ಗೋಲು ಕೀಪರ್ ಅವುಗಳನ್ನು ವಿಫಲಗೊಳಿಸಿದರು. ಕೊನೆಯಲ್ಲಿ ಗದ್ದೆಹಳ್ಳ ತಂಡವು 1-0 ಗೋಲುಗಳಿಂದ ಜಯಗಳಿಸಿತು.
ಎರಡನೇ ಪಂದ್ಯವು ಮೋಗ್ರಲ್ ಬ್ರೋಸ್ ಎಫ್.ಸಿ.ಕುಂಬ್ಳೆ ಮತ್ತು ನಂಜನಗೂಡು ಎಫ್.ಸಿ. ನಂಜನಗೂಡು ತಂಡಗಳ ನಡುವೆ ನಡೆಯಿತು. ಈ ಪಂದ್ಯದ ಉದ್ಘಾಟನೆಯನ್ನು ಕನ್ನಡದ ಸ್ಟಾರ್ ಸುವರ್ಣ ಚಾನಲಿನಲ್ಲಿ ನಡೆದ ಪ್ಯಾಟೆ ಹುಡ್ಗಿ ಹಳ್ಳಿ ಲೈಫ್ ಖ್ಯಾತಿಯ ನಾಲ್ಕನೇ ಆವೃತ್ತಿಯ ವಿಜೇತೆ ಮೆಬಿನಾ ಮೈಕಲ್ ನೆರವೇರಿಸಿದರು.
ಪಂದ್ಯದ ಆರಂಭದಿಂದಲೂ 2 ತಂಡಗಳು ಚೆಂಡಿನ ಮೇಲೆ ಹಿಡಿತವನ್ನು ಸಾಧಿಸಿದ್ದವು. ಕೊಡಗಿನ ಆಟಗಾರರನ್ನು ಹೊಂದಿದ್ದ ನಂಜ&divound;ಗೂಡು ತಂಡವು ವಿರೋಧಿ ತಂಡಕ್ಕೆ ಪೈಪೋಟಿಯನ್ನೇ ನೀಡಿತು. ಪಂದ್ಯದ ಮೊದಲಾರ್ಧದ 13ನೇ ನಿಮಿಷದಲ್ಲಿ ಕುಂಬ್ಳೆ ತಂಡದ ಆಟಗಾರನ ಕೈಗೆ ತಗುಲಿದರಿಂದ ಅಂಪೈರ್ ಟೈ ಬ್ರೇಕರ್ ತೀರ್ಪು ನೀಡಿದರು. ಅಂಪೈರ್ ತೀರ್ಪಿಗೆ ತಲೆಬಾಗಿದ ಕುಂಬ್ಳೆ ತಂಡ ಟೈ ಬ್ರೇಕರ್‍ಗೆ ಒಪ್ಪಿಗೆ ನೀಡಿದರಿಂದ ನಂಜನಗೂಡು ತಂಡದ ಜುನೈದ್ ಅದನ್ನು ಗೋಲಾಗಿ ಪರಿವರ್ತಿಸಿ 1-0 ಗೋಲುಗಳಿಂದ ಮುನ್ನಡೆದರು.
ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟವಾಡಿದ ಕುಂಬ್ಳೆ ತಂಡ ಆಗಾಗ್ಗೆ ನಂಜನಗೂಡು ತಂಡದ ಗೋಲು ಪಟ್ಟಿಯೊಳಗೆ ಧಾಳಿ ನಡೆಸಿದರೂ ಗೋಲು ಕೀಪರ್ ಅದನ್ನು ವಿಫಲಗೊಳಿಸಿದರು. ಇನ್ನೇನು ಆಟ ಮುಗಿಯಬೇಕು ಅನ್ನುವಷ್ಟರಲ್ಲಿ ಕುಂಬ್ಳೆ ತಂಡದ ರಿಂಟೋ 1 ಗೋಲು ಹೊಡೆಯುವದರ ಮೂಲಕ 1-1 ಗೋಲುಗಳ ಸಮಬಲ ಸಾಧಿಸಿದರು. ಕೊನೆಯಲ್ಲಿ ಅಂಪೈರ್ ಟೈ ಬ್ರೇಕರ್ ತೀರ್ಪು ನೀಡಿದರಿಂದ ನಂಜನಗೂಡು ಎಫ್.ಸಿ,ನಂಜನಗೂಡು ತಂಡವು 6-5 ಗೋಲುಗಳಿಂದ ಜಯಸಾಧಿಸಿ ಸೆಮಿಫೈನಲಿಗೆ ಪ್ರವೇಶ ಪಡೆದುಕೊಂಡಿತು.