ಸುಂಟಿಕೊಪ್ಪ, ಮೇ 29: ಕಂಬಿಬಾಣೆ ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಬಯಲು ಮಂದಿರವನ್ನು ರಾಜ್ಯ ಸರಕಾರ ಅನುದಾನದಲ್ಲಿ ನಿರ್ಮಿಸಿಕೊಡಲಿದ್ದು, ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ ಹೇಳಿದರು.
ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವಾಲಯದಲ್ಲಿ ನೂತನವಾಗಿ ಜಿ.ಪಂ.ಅನುದಾನ ಹಾಗೂ ದಾನಿಗಳ ನೆರವಿನಿಂದ ನಿರ್ಮಿಸಿದ ರಂಗ ಮಂದಿರ ಉದ್ಘಾಟನೆ ಹಾಗೂ 4ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು; ದೇವಾಲಯ ನಿರ್ಮಾಣ ಕಾರ್ಯ ಕಷ್ಟವಾದದ್ದು; ಆದರೆ ಇಲ್ಲಿನ ಆಡಳಿತ ಮಂಡಳಿ ಯವರ ಶ್ರಮದಿಂದ ಆದಷ್ಟು ಬೇಗ ರಂಗ ಮಂದಿರ ನಿರ್ಮಿಸ ಲಾಗಿದೆ. ನೀಡಿದ ಅನುದಾನ ಸದ್ಬಳಕೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬಯಲು ರಂಗಮಂದಿರಕ್ಕೆ ರಾಜ್ಯ ಸರಕಾರ 10 ಲಕ್ಷದಿಂದ 1 ಕೋಟಿ ಅನುದಾನ ಒದಗಿಸುತ್ತಿದ್ದು ಈ ದೇವಾಲಯ ಆಡಳಿತ ಮಂಡಳಿಯವರು ದೇವಾಲಯ ಜಾಗದ ನಕ್ಷೆ, ದಾಖಲೆ ನೀಡಿದರೆ ಅದನ್ನು ಸರಕಾರದಿಂದ ಬಿಡುಗಡೆಗೊಳಿಸಲಾಗುವದು. ಉಪ್ಪುತೋಡು ಸೇತುವೆ ನಿರ್ಮಾಣಕ್ಕೆ 60 ಲಕ್ಷ ರೂ. ಮಂಜೂರು ಮಾಡಿಸಲಾಗುವದೆಂದೂ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾU Àವಹಿಸಿದ್ದ ಹಾಸನ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ ಅಧ್ಯಕ್ಷ ಎ.ಲೋಕೇಶ್‍ಕುಮಾರ್ ದೈವಿಕ ಪೂಜೆ ಪುನಸ್ಕಾರದಿಂದ ಮನುಷ್ಯನ ಜಾತಕದಲ್ಲಿ ದೋಷದ ಪರಿಹಾರ ಸಿಗಲಿದ್ದು, ಮಾನಸಿಕ ಶಾಂತಿ, ನೆಮ್ಮದಿ, ಅಭಿವೃದ್ಧಿಯನ್ನು ಕಂಡುಕೊಳ್ಳಬಹುದು. ಮಂದಿನ ದಿನಗಳಲ್ಲಿ ಶ್ರೀರಾಮ ಮತ್ತು ಚಾಮುಂಡೇಶ್ವರಿ ದೇವಾಲಯಕ್ಕೆ ತನ್ನಿಂದಾಗುವ ಸಹಾಯ ಒದಗಿಸಲಿದ್ದೇನೆ ಸರಕಾರದಿಂದಲೂ ಜಿ.ಪಂ. ಸದಸ್ಯೆ ಚಂದ್ರಕಲಾ ಅನುದಾನ ದೊರಕಿಸಲಿದ್ದಾರೆಂದು ಹೇಳಿದರು.
ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವಿಗೆ ಪಂಚವಿಂರತಿ ಪೂಜೆ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಗಣº Éೂೀಮ, ದುರ್ಗಾಹೋಮ, ರಾಮ ತಾರಕ ಹೋಮ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ರೋಶಿನಿ ತೋಟ ಮಾಲೀಕರೂ, ಉದ್ಯಮಿ ಗಳಾದ ಐ. ರಾಮಚಂದ್ರಶೆಟ್ಟಿ, ಮತ್ತಿಕಾಡು ತೋಟದ ಮಾಲೀಕ ಪಿ.ಕೆ.ಮುತ್ತಣ್ಣ, ಗಣಪತಿ ನರ್ಸರಿ ಮಾಲೀಕ ಜಿ.ಕುಮಾರಸ್ವಾಮಿ, ನಿವೃತ್ತ ಶಿಕ್ಷಕ ಇಡ್ಯಡ್ಕ ಶಾಂತಪ್ಪ ಹಾಗೂ ಅನಿಲ್ ಉಪಸ್ಥಿತರಿದ್ದರು.
ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಶಶಿಕಾಂತ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ದೇವಾಲಯ ಕಾರ್ಯದರ್ಶಿ ಜವಾಹರ್ ವಂದಿಸಿ ದರು. ರಂಗ ಮಂದಿರಕ್ಕೆ ಅನುದಾನ ಒದಗಿಸಿದ ಜಿ.ಪಂ.ಸದಸ್ಯೆ ಕೆ.ಪಿ. ಚಂದ್ರಕಲಾ ಅವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು.