ನಾಪೆÇೀಕ್ಲು, ಮೇ 28: ರೈತರಿಗೆ ಸರಕಾರ ನೀಡಿದ ಬೆಳೆ ಪರಿಹಾರದಲ್ಲಿ ತಾರತಮ್ಯವಾಗಿದ್ದು, ಒಂದು ವಾರದೊಳಗೆ ಇದನ್ನು ಸರಿಪಡಿಸದಿದ್ದರೆ ಜಯಕರ್ನಾಟಕ, ಸೇವ್ ಕೊಡಗು ಫೆÇೀರಂ, ರೈತ ಸಂಘ, ನಾಪೆÇೀಕ್ಲು ವಾಹನ ಚಾಲಕರ ಮತ್ತು ಮಾಲಿಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಜಯಕರ್ನಾಟಕ ಸಂಘಟನೆಯ ಮಡಿಕೇರಿ ತಾಲೂಕು ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ, ಸೇವ್ ಕೊಡಗು ಫೆÇೀರಂನ ಎನ್.ಎಸ್. ಉದಯ ಶಂಕರ್, ಮನು ಮಹೇಶ್, ಬೊಪ್ಪಂಡ ಕವನ್ ಎಚ್ಚರಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರು ಭತ್ತದ ಗದ್ದೆ, ಕಾಫಿ, ಒಳ್ಳೆಮೆಣಸು, ತೆಂಗು, ಅಡಿಕೆ ಬೆಳೆಗಳು ಸೇರಿದಂತೆ ಮನೆ, ಜಾನುವಾರು ನಷ್ಟಕ್ಕೆ ಬೇರೆ ಬೇರೆಯಾಗಿ ಪರಿಹಾರ ನೀಡಬೇಕು. ನಷ್ಟದ ಬಗ್ಗೆ ಎಲ್ಲಾ ರೈತರು ಕಂದಾಯ ಇಲಾಖೆಗೆ ಅರ್ಜಿ ನೀಡಿದ್ದಾರೆ. ಈ ಅರ್ಜಿಯನ್ನು ಆನ್ಲೈನ್ನಲ್ಲಿ ದಾಖಲಿಸಿದೆ ಅಧಿಕಾರಿಗಳು ನಾಟಕವಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರದ ವತಿಯಿಂದ ನೀಡಲಾಗುವ ಪರಿಹಾರವನ್ನು ಕೂಡಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದು ಅವರುಗಳು ಒತ್ತಾಯಿಸಿದ್ದಾರೆ.