ಸಿದ್ದಾಪುರ, ಮೇ 28: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ನದಿ ದಡದಲ್ಲಿ ವಾಸವಾಗಿರುವ ನಿವಾಸಿಗಳಿಗೆ ಕಂದಾಯ ಇಲಾಖೆ ವತಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ನೋಟೀಸ್ ಜಾರಿ ಮಾಡಲಾಯಿತು.

ವಷಂಪ್ರತಿ ಮಳೆಗಾಲದ ಸಂದರ್ಭ ಸಿದ್ದಾಪುರದ ಕರಡಿಗೋಡು, ಗುಹ್ಯ ಹಾಗೂ ಕಕ್ಕಟ್ಟುಕಾಡು ನದಿ ದಡದಲ್ಲಿ ವಾಸಿಸುವ ಮಂದಿ ಪ್ರವಾಹದ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕುತ್ತಿರುವ ಹಿನ್ನೆಲೆ ಅಮ್ಮತ್ತಿ ಕಂದಾಯ ಇಲಾಖೆಯ ವತಿಯಿಂದ ನೋಟೀಸ್ ಜಾರಿ ಮಾಡಲಾಯಿತು.

ಈ ಸಂದರ್ಭ ಕಂದಾಯ ಪರಿವೀಕ್ಷಕ ಅನಿಲ್, ಗ್ರಾಮ ಲೆಕ್ಕಿಗ ಸಂತೋಷ್, ಅನೀಶ್, ಗೌಡಜ್ಜ, ಸಹಾಯಕ ಕೃಷ್ಣ, ಮಂಜುನಾಥ್ ಇದ್ದರು.