ಮಡಿಕೇರಿ, ಮೇ 27: ಇಲ್ಲಿನ ದೇಚೂರು ಶ್ರೀ ರಾಮ ವಿದ್ಯಾ ಗಣಪತಿ ದೇವಸ್ಥಾನದ ಪುನರ್ ಬ್ರಹ್ಮಕಲಶ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ತಾ. 25 ರಿಂದ ವಿವಿಧ ಪೂಜಾದಿ ಕಾರ್ಯಗಳು ಆರಂಭ ಗೊಂಡಿದ್ದು, ಇಂದು ಬೆಳಗ್ಗೆಯಿಂದ ಅಂಕುರ ಪೂಜೆ, ಗಣಪತಿ ಹವನ, ತತ್ವಹೋಮ, ಕಲಾ ಹೋಮ, ಕಲಶ ಪೂಜೆ, ಬ್ರಹ್ಮಕಲಶಾಭಿಷೇಕ, ಮುಗುಲ ಕುಶ ಸ್ಥಾಪನೆಯೊಂದಿಗೆ ಮಹಾಪೂಜೆ ನೆರವೇರಿತು. ಪ್ರಸಾದ ವಿತರಣೆಯೊಂದಿಗೆ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.