ಚೆಟ್ಟಳ್ಳಿ, ಮೇ 28: ತಲಕಾವೇರಿ ದೈವ ಸನ್ನಿಧಿಯಲ್ಲಿ ಹನ್ನೆರಡು ವರ್ಷಕೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವವು ಈ ಬಾರಿ ನಡೆಯಿತು. ಬ್ರಹ್ಮಕಲಶೋತ್ಸವ ನಡೆದ 48 ದಿವಸದಲ್ಲಿ ನಿಯಮದಂತೆ ನಡೆಯಬೇಕಾಗಿದ್ದ ದೃಢ ಕಳಶ ಪೂಜೆಯು ಇಂದು ತಲಕಾವೇರಿಯ ಅಗಸ್ತೇಶ್ವರ ಸನ್ನಿದಿಯಲ್ಲಿ ಕ್ಷೇತ್ರ ತಂತ್ರಿಗಳಾದ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಪೂರ್ವಾಹ್ನ 12 ಗಂಟೆಯವರೆಗೆ ವಿಜೃಂಭಣೆಯಿಂದ ನಡೆಯಿತು.
ಪೂಜೆಯಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಸದಸ್ಯರು ಗಳಾದ ಉದಿಯಂಡ ಸುಭಾಷ್, ಕೆದಂಬಾಡಿ ರಮೇಶ್, ನಿಡ್ಯಮಲೆ ಮೀನಾಕ್ಷಿ, ಕ್ಷೇತ್ರ ತಕ್ಕ ಮತ್ತು ಸದಸ್ಯ ಕೋಡಿ ಮೋಟಯ್ಯ, ಕಾರ್ಯಕಾರಿ ಮಂಡಳಿಯ ಕಾರ್ಯನಿರ್ವಹಣಾ ಅಧಿಕಾರಿ ಜಗದೀಶ್, ದೇವಸ್ಥಾನದ ಪಾರುಪತ್ಯಗಾರ ಕೊಂಡಿರ ಪೊನ್ನಣ್ಣ , ರಾಜೇಶ್ ಆಚಾರ್, ಪುತ್ತರಿರ ಪಪ್ಪು ತಿಮ್ಮಯ್ಯ, ಮಣವಟ್ಟೀರ ಮತ್ತು ಪಟ್ಟಮಾಡ ಕುಟುಂಬಸ್ಥರು ಮತ್ತು ದೇವಸ್ಥಾನದ ಅರ್ಚಕ ವೃಂದದವರು ಪಾಲ್ಗೊಂಡಿದ್ದರು.