ಶ್ರೀಮಂಗಲ, ಮೇ 28 : ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾವಳಗೇರಿ ಮತ್ತು ಟಿ. ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಟಿ. ಶೆಟ್ಟಿಗೇರಿಯ ಮಾಯಣಮಾಡ ನಾಣಯ್ಯ, ಚೊಟ್ಟೆಯಂಡಮಾಡ ಧನು, ತಾವಳಗೇರಿ ತಡಿಯಂಗಡ ನಾಚಪ್ಪ, ತಡಿಯಂಗಡ ಪೆÇನ್ನಪ್ಪ, ತಡಿಯಂಗಡ ಸೋಮಣ್ಣ ಅವರಿಗೆ ಸೇರಿದ ತೋಟಕ್ಕೆ ನುಗ್ಗಿರುವ ಕಾಡಾನೆ ಹಿಂಡು ಕಾಫಿ, ಕರಿಮೆಣಸು, ಬಾಳೆ, ಅಡಿಕೆಗಳನ್ನು ತುಳಿದು ನಾಶ ಪಡಿಸಿವೆ. ಇದಲ್ಲದೆ ತಾವಳಗೇರಿ ಗ್ರಾಮದ ಆಂಡಮಾಡ ಭರತ್, ಬೆಲ್ಲು ಅವರ ಎರಡು ಎಕರೆ ಬಾಳೆ ಮತ್ತು ಅಡಿಕೆ ಗಿಡಗಳನ್ನು ಕಾಡಾನೆ ಹಿಂಡುಗಳು ನಾಶಗೊಳಿಸಿದೆ.

ಸ್ಥಳಕ್ಕೆ ಆಗಮಿಸಿದ ಪೆÇನ್ನಂಪೇಟೆ ಆರ್.ಎಫ್.ಓ ಗಂಗಾಧರ್ ಅವರು ಸರ್ಕಾರದ ನಿಂiÀiಮಾನುಸಾರ ಬೆಳೆ ನಷ್ಟಕ್ಕೆ ಗರಿಷ್ಟ ಪ್ರಮಾಣದ ಪರಿಹಾರ ನೀಡುವ ಭರವಸೆ ನೀಡಿದರು. ಈ ಸಂದರ್ಭ ಜಿಲ್ಲಾ ರೈತ ಸಂಘ ಪೆÇ್ರ. ನಂಜುಂಡಸ್ವಾಮಿ ಬಣದ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಗಣಪತಿ ಹಾಗು ಪ್ರಧಾನ ಕಾರ್ಯದರ್ಶಿ ಕಳ್ಳಿಚಂಡ ಧನು ಅವರು ಸುಮಾರು 16 ಕಾಡಾನೆಗಳ ಹಿಂಡು ಗ್ರಾಮದಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿದ್ದು, ಇವುಗಳನ್ನು ಅರಣ್ಯಕ್ಕಟ್ಟಲು ಕೂಡಲೇ ಕ್ರಮ ಕೈಗೊಳ್ಳಬೇಕು. ಅಲ್ಲದೆ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಕಾಡಾನೆಗಳನ್ನು ಅರಣ್ಯಕ್ಕಟ್ಟಲು ತ್ವರಿತವಾಗಿ ಕಾರ್ಯಾಚರಣೆ ಕೈಗೊಳ್ಳಲಾಗುವದು ಎಂದು ವಲಯ ಅರಣ್ಯ ಅಧಿಕಾರಿ ಗಂಗಾಧರ್ ಭರವಸೆ ನೀಡಿದರು.

ರೈತ ಸಂಘದ ಅಧ್ಯಕ್ಷ ಗಣೇಶ್ ಗಣಪತಿ ಹಾಗೂ ಪದಾಧಿಕಾರಿಗಳು ಕಾಡಾನೆ ಹಿಂಡಿನಿಂದ ಬೆಳೆ ನಷ್ಟಗೊಂಡಿರುವ ಸ್ಥಳಗಳಿಗೆ ಬೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿ ಅರಣ್ಯ ಇಲಾಖೆಯಿಂದ ದೊರೆಯಬೇಕಾದ ಬೆಳೆ ನಷ್ಟ ಪರಿಹಾರ ಅತೀ ಶೀಘ್ರದಲ್ಲಿ ಹಾಗೂ ಗರಿಷ್ಠ ಪ್ರಮಾಣದಲ್ಲಿ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸುವದಾಗಿ ಹೇಳಿದರು. ಇದೇ ಸಂದರ್ಭ ಈ ವ್ಯಾಪ್ತಿಯಲ್ಲಿ ಕಾಡಾನೆ ಹಿಂಡುಗಳನ್ನು ಗ್ರಾಮದಿಂದ ಅರಣ್ಯಕ್ಕಟ್ಟಲು ಕಾರ್ಯಪಡೆ ತಂಡವನ್ನು ಶಾಶ್ವತವಾಗಿ ಈ ವ್ಯಾಪ್ತಿಗೆ ನಿಯೋಜಿಸಬೇಕು. ಪರಿಹಾರ ಮೊತ್ತವನ್ನು ವೈಜ್ಞಾನಿಕವಾಗಿ ಪರಿಷ್ಕರಿಸಬೇಕು. ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಕೂಡಲೇ ತುಂಬಬೇಕು. ಅಲ್ಲದೆ ಗುತ್ತಿಗೆ ಆಧಾರದ ಮೇಲೆ ನಿಯೋಜಿಸಿಕೊಂಡಿರುವ ಸಿಬ್ಬಂದಿಗಳಿಗೆ ವಿಳಂಬ ಮಾಡದೇ ಬಾಕಿ ವೇತನವನ್ನು ನೀಡಬೇಕು. ಇಲ್ಲದಿದ್ದರೆ ಈ ನಿಟ್ಟಿನಲ್ಲಿ ಜಿಲ್ಲಾ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು.

ಕಾಡಾನೆಗಳು ರಾತ್ರಿ ವೇಳೆ ರೈತರ ಬೆಳೆ ನಷ್ಟಗೊಳಿಸುತ್ತಿದ್ದು, ಹಗಲು ವೇಳೆ ಟಿ. ಶೆಟ್ಟಿಗೇರಿ ಕೋರಕಟ್ಟು ಅಯ್ಯಪ್ಪ ದೇವರ ಕಾಡಿನಲ್ಲಿ ಬೀಡು ಬಿಡುತ್ತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ರೈತ ಸಂಘದ ಉಳುವಂಗಡ ದತ್ತ, ದೇಕಮಾಡ ವಿನು, ಚಂಗುಲಂಡ ರಾಜಪ್ಪ, ಅಯ್ಯಮಾಡ ಹ್ಯಾರಿ, ಚೊಟ್ಟಯಂಡಮಾಡ ಕಿರಣ್ ಮತ್ತಿತರರು ಹಾಜರಿದ್ದರು.