ಮಡಿಕೇರಿ, ಮೇ 29: ಸಂತ್ರಸ್ತರ ಪರಿಹಾರ ಲಭಿಸಿಲ್ಲವೆಂದು ಅನಗತ್ಯವಾಗಿ ವಿವಿಧ ಕಚೇರಿಗಳಿಗೆ ಸಾರ್ವಜನಿಕರು ಅಲೆಯುವದ್ದನ್ನು ಮಡಿಕೇರಿ, ಮೇ 29: ಸಂತ್ರಸ್ತರ ಪರಿಹಾರ ಲಭಿಸಿಲ್ಲವೆಂದು ಅನಗತ್ಯವಾಗಿ ವಿವಿಧ ಕಚೇರಿಗಳಿಗೆ ಸಾರ್ವಜನಿಕರು ಅಲೆಯುವದ್ದನ್ನು ಅದಾಲತ್’ ಯಶಸ್ವಿಗೊಂಡಿದ್ದು, ಈ ಪೈಕಿ ಒಟ್ಟು 4 ಸಾವಿರದಷ್ಟು ಮಂದಿಯ ದಾಖಲಾತಿ ಪರಿಶೀಲನೆಯೊಂದಿಗೆ, 1571 ಮಂದಿ ಪರಿಹಾರ ಕೋರಿ ಮತ್ತೆ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಸಂತ್ರಸ್ತರ ಪುನರ್ವಸತಿ ಜಿಲ್ಲಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಟಿ. ಜವರೇಗೌಡ ತಿಳಿಸಿದ್ದಾರೆ.ಜಿಲ್ಲಾ ಆಡಳಿತ ಭವನದಲ್ಲಿ ಏರ್ಪಡಿಸಿದ್ದ ಪರಿಹಾರ ಅದಾಲತ್‍ನಲ್ಲಿ ತಾ. 27 ರಂದು ಸುಮಾರು 800 ಮಂದಿಯ
(ಮೊದಲ ಪುಟದಿಂದ) ದಾಖಲೆ ಪರಿಶೀಲನೆಯೊಂದಿಗೆ 243 ಮಂದಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ನಿನ್ನೆ 481 ಅರ್ಜಿಗಳು ಬಂದಿದ್ದು, 1200 ಮಂದಿಯ ದಾಖಲೆಗಳ ಪರಿಶೀಲನೆ ನಡೆದಿದೆ. ಇಂದು ಅದಾಲತ್ ಕೊನೆಯ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ನಾಲ್ಕು ದಿಕ್ಕಿನಿಂದ ಸುಮಾರು 2 ಸಾವಿರ ಮಂದಿ ಧಾವಿಸಿ ತಮ್ಮ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದರೆ 847 ಜನರು ಅರ್ಜಿ ಸಲ್ಲಿಸಿ ಪರಿಹಾರ ಕೋರಿದ್ದಾರೆ.
ಜಿಲ್ಲಾಧಿಕಾರಿ ವಿವರಣೆ : ಜಿಲ್ಲಾ ಮಟ್ಟದಲ್ಲಿ ಮೂರು ದಿವಸ ಆಯೋಜಿಸಿದ್ದ ಅದಾಲತ್‍ಗೆ ಜನವಲಯದಲ್ಲಿ ಉತ್ತಮ ಸ್ಪಂದನ ಲಭಿಸಿದ್ದು, ಅನೇಕರು ನೇರವಾಗಿ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಕೊಂಡಿದ್ದಾರೆ. ಇನ್ನು ಕೆಲವರು ಸಲ್ಲಿಸಿರುವ ಅರ್ಜಿಗಳನ್ನು ಆಯ ಗ್ರಾ.ಪಂ. ಅಧಿಕಾರಿಗಳು ಹಾಗೂ ಗ್ರಾಮಲೆಕ್ಕಿಗರಿಂದ ಪರಿಶೀಲಿಸಿ, ವಾಸ್ತವ ತಿಳಿದುಕೊಂಡು ಅಗತ್ಯ ನೆರವು ಕಲ್ಪಿಸುವದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪ್ರತಿಕ್ರಿಯಿಸಿದ್ದಾರೆ.
ಪ್ರತಿ ಹೋಬಳಿ ಹಾಗೂ ಗ್ರಾ.ಪಂ. ಹಂತದಲ್ಲಿ ಪರಿಹಾರ ಅದಾಲತ್ ನಡೆಸುವ ಆಶಯವಿದ್ದರೂ, ಅಂತರ್ಜಾಲ ಸಂಪರ್ಕ ಹಾಗೂ ದಾಖಲೆಗಳ ಪರಿಶೀಲನೆಗೆ ಆ ಹಂತದಲ್ಲಿ ಗಣಕಯಂತ್ರಗಳ ನಿರ್ವಹಣೆಗೆ ಸಮರ್ಪಕ ವ್ಯವಸ್ಥೆಯ ಕೊರತೆಯಿಂದ ಜಿಲ್ಲಾಡಳಿತ ಭವನದಲ್ಲಿ ಅದಾಲತ್ ನಡೆಸಿದ್ದಾಗಿ ಸ್ಪಷ್ಟಪಡಿಸಿದರು.
ಅಲ್ಲದೆ ಪ್ರತಿ ಹೋಬಳಿವಾರು ಕಾರ್ಯಕ್ರಮ ಆಯೋಜಿಸಿದ್ದರೆ ಸಮಯ ಅಭಾವದೊಂದಿಗೆ; ಮಳೆ ಆರಂಭಗೊಂಡರೆ ತೊಂದರೆಯ ಕಾರಣದಿಂದ ಈ ರೀತಿ ವ್ಯವಸ್ಥೆ ಮಾಡಬೇಕಾಯಿತು ಎಂದ ಅವರು, ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ವಿವರಿಸಿದರು.
ಪರಿಶೀಲಿಸಿ ಕ್ರಮ : ಪ್ರಸಕ್ತ ಸಲ್ಲಿಕೆಯಾಗಿರುವ ಹೊಸ ಅರ್ಜಿಗಳನ್ನು ಆಯ ಗ್ರಾ.ಪಂ. ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಪರಿಶೀಲಿಸಿ, ಸರಕಾರದ ಮಾರ್ಗಸೂಚಿಯಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಉಪವಿಭಾಗಾಧಿಕಾರಿ ಟಿ. ಜವರೇಗೌಡ ಸ್ಪಷ್ಟಪಡಿಸಿದರು. ಕೆಲವರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ಹಣ ಜಮಾವಣೆಗೊಂಡಿರುವ ಬಗ್ಗೆ ಅರಿವಿಲ್ಲದೆ, ಗೊಂದಲದಿಂದ ಬಂದವರಿದ್ದುದಾಗಿ ನೆನಪಿಸಿದ ಅವರು, ಈ ಅದಾಲತ್‍ನಿಂದ ಸಾಕಷ್ಟು ಮಂದಿ ಪರಿಹಾರ ಕಂಡುಕೊಂಡಿರುವರೆಂದು ಮಾಹಿತಿ ನೀಡಿದರು.