ಮಡಿಕೇರಿ, ಮೇ 29 : ಬೆಂಗಳೂರಿನ ಕಲ್ಯಾಣ್ ನಗರದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಸಬ್ ಜೂನಿಯರ್ಸ್, ಜೂನಿಯರ್ಸ್ ಹಾಗೂ ಸೀನಿಯರ್ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಎರಡು ವಿಭಾಗಗಳಲ್ಲಿ ಭಾಗವಹಿಸಿ 12 ಚಿನ್ನ, 12 ಬೆಳ್ಳಿ ಹಾಗೂ 16 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.
ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ಕ್ರೀಡಾಪಟು ದೃತಿ ಹೃಷಿಕಾ ಬಿ. ಶಂಕರ್ 2 ಚಿನ್ನ, ಮುಕ್ಕಾಟಿರ ಸೋಮಣ್ಣ ಅಶ್ವಿನ್ 2 ಚಿನ್ನ, ಚಂಡೀರ ಮೌರ್ಯ ಸುಧಾಕರ್ 2 ಚಿನ್ನ, ವರುಣ್ ಎನ್.ನಾರಾಯಣ್ 2 ಚಿನ್ನ ಗೆದ್ದಿದ್ದಾರೆ.
ತೆನ್ನೀರಾ ಶಾನ್ ಪೊನ್ನಪ್ಪ 1 ಚಿನ್ನ, 1 ಬೆಳ್ಳಿ, ಪೂಜಾರಿರ ಬೃಹತ್ ಬೋಪಯ್ಯ ದೇವರಾಜ್ 1 ಚಿನ್ನ, 1 ಬೆಳ್ಳಿ, ಎ ಬೀನ್ ಥೋಮಸ್ 1 ಚಿನ್ನ, 1 ಕಂಚು, ಬಿ.ಎಲ್. ಭಾವನಾ ರೈ 1 ಚಿನ್ನ, 1 ಕಂಚು, ಬಿಟ್ಟೀರಾ ಪವಿನ್ ಚಂಗಪ್ಪ 2 ಬೆಳ್ಳಿ, ಅಂಗೀರ ವರುಣ್ ಸುಬ್ರಮಣಿ 2 ಬೆಳ್ಳಿ, ಮೋನಿಕಾ ಕೆ. ಮಂಜುನಾಥ್ 1 ಬೆಳ್ಳಿ, 1 ಕಂಚು, ಕೋಚನ ಯಶಸ್ಸ್ ಗಿರೀಶ್ 1 ಬೆಳ್ಳಿ, 1 ಕಂಚು, ಲೋಹಿತ್ ರವಿ ಚಂದ್ರ 1 ಬೆಳ್ಳಿ, 1 ಕಂಚು, ಪೂಜಾರಿರ ಚಿರಾಗ್ ಚಿನ್ನಪ್ಪ 1 ಬೆಳ್ಳಿ, 1 ಕಂಚು, ಕೆ.ಎ.ವರುಣ್ ಕಾರ್ತಿಕ್ 1 ಬೆಳ್ಳಿ, 1 ಕಂಚು, ಜೀವನ್ ಮುತ್ತು ಕುಮಾರ್ 1 ಬೆಳ್ಳಿ, 1 ಕಂಚು, ಮೊಗೇರ ಸುಮಂತ್ ರಾಮು 2 ಕಂಚು, ಪ್ರೀತಮ್ ಎಮ್. ಹರೀಶ್ 1 ಚಿನ್ನ, 1 ಕಂಚು, ಕುಶ ರಮೇಶ್ 2 ಕಂಚು, ಬೊಮ್ಮುಡಿರ ದೇವಿಶ್ರೀ ಪ್ರಭಾಕರ್ 2 ಕಂಚು ಪಡೆದುಕೊಂಡಿದ್ದಾರೆ.
ರಾಜ್ಯದ ವಿವಿಧೆಡೆಗಳಿಂದ ಸುಮಾರು 35ಕ್ಕೂ ಹೆಚ್ಚು ತಂಡಗಳು ಆಗಮಿಸಿದ್ದು, ಕೊಡಗಿನ ತಂಡ ಉತ್ತಮ ಸಾಧನೆ ಮಾಡಿದೆ ಎಂದು ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ.ಲೋಕೇಶ್ ರೈ ತಿಳಿಸಿದ್ದಾರೆ.