ಗೋಣಿಕೊಪ್ಪ ವರದಿ, ಮೇ. 29: ಹರಿಯಾಣದ ಹಿಸ್ಸಾರ್‍ನಲ್ಲಿ ಹಾಕಿ ಇಂಡಿಯಾ ವತಿಯಿಂದ ನಡೆಯುತ್ತಿ ರುವ ರಾಷ್ಟ್ರಮಟ್ಟದ ಸಬ್‍ಜೂನಿಯರ್ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡ ಮತ್ತೊಂದು ಸೋಲು ಅನುಭವಿಸಿದೆ.
ಟೂರ್ನಿಯಲ್ಲಿ 2ನೇ ಪಂದ್ಯವನ್ನಾಡಿದ ಕೂರ್ಗ್ ತಂಡವು; ಜಾರ್ಖಂಡ್ ವಿರುದ್ದ 0-25 ಗೋಲು ಗಳ ಅಂತರದಿಂದ ಪರಾಭವ ಗೊಂಡಿತು. ಒಂದೂ ಗೋಲು ದಾಖಲಿಸಲಾಗದೆ ಪರದಾಡಿತು. ತೀವ್ರ ನಿರಾಸೆ ಅನುಭವಿಸಿರುವ ಹಾಕಿ ಕೂರ್ಗ್ ತಂಡವು ತಾ. 31 ರಂದು ಆಂಧ್ರಪ್ರದೇಶ ವಿರುದ್ಧ 3ನೇ ಪಂದ್ಯವನ್ನಾಡಲಿದೆ.