ಕುಶಾಲನಗರ, ಮೇ 28: ಕುಶಾಲನಗರ ಗ್ರಾಮಾಂತರ ಠಾಣೆಯ ಮೂವರು ಸಹಾಯಕ ಪೊಲೀಸ್ ಠಾಣಾಧಿಕಾರಿಗಳಿಗೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಆಗಿ ಪದೋನ್ನತಿ ಲಭಿಸಿದೆ. ಠಾಣೆಯಲ್ಲಿ ಎಎಸ್‍ಐ ಆಗಿದ್ದ ಅಪ್ಪಾಜಿ ಅವರಿಗೆ ಮಡಿಕೇರಿ ಸೈಬರ್ ಘಟಕ, ಭೋಜಪ್ಪ ಅವರನ್ನು ಮಡಿಕೇರಿ ಡಿಸಿಐಬಿ, ಹೆಚ್.ಸಿ. ಸಣ್ಣಯ್ಯ ಅವರನ್ನು ವೀರಾಜಪೇಟೆ ಅರಣ್ಯ ಸಂಚಾರಿ ವಿಶೇಷ ದಳದ ಸಬ್ ಇನ್ಸ್‍ಪೆಕ್ಟರ್ ಆಗಿ ನಿಯೋಜಿಸಲಾಗಿದೆ.