ಮಡಿಕೇರಿ, ಮೇ 28: ಫೀಲ್ಡ್ ಮಾಷರ್Àಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಮತ್ತು ಸಂತೋಷ ಕೂಟ ಕಾರ್ಯಕ್ರಮ ಜೂ. 1 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕೆÀ್ಷ ಎಂ. ಶೋಭಾ ಸುಬ್ಬಯ್ಯ, ಜೂ. 1 ರಂದು ಬೆಳಿಗ್ಗೆ 10 ಗಂಟೆಗೆ ಮಹಾಸಭೆ ಆರಂಭಗೊಳ್ಳಲಿದ್ದು, ನಂತರ ಸಂತೋಷ ಕೂಟವನ್ನು ಆಯೋಜಿಸಲಾಗಿದೆ ಎಂದರು. ಸಂಘದ ಎಲ್ಲಾ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ ಅವರು, ವಿಳಾಸಗಳು ಬದಲಾಗಿದ್ದಲ್ಲಿ ಸಂಘದ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭ ಸಂಘವು ನಡೆಸಿಕೊಂಡು ಬಂದಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ದಾನಿಗಳಾದ ಮೂಡೆರ ಜಗದೀಶ್ ಅವರು ಸಂಘಕ್ಕೆ ನೀಡಿದ 5 ಲಕ್ಷ ರೂ.ಗಳಿಗೆ ಇತರ ಸದಸ್ಯರು ಮತ್ತು ದಾನಿಗಳು ನೀಡಿದ ನೆರವನ್ನು ಸೇರಿಸಿ ಅಂದಾಜು ರೂ. 7.50 ಲಕ್ಷ ವೆಚ್ಚದಲ್ಲಿ ಕಾಲೆÉೀಜಿಗೆ ನೂತನ ಕೊಠಡಿಯೊಂದನ್ನು ನಿರ್ಮಿಸಿಕೊಟ್ಟಿರುವದಾಗಿ ತಿಳಿಸಿದರು.
ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳ ಕಾಲ ಶಿಬಿರವನ್ನು ಆಯೋಜಿಸಲಾಗಿತ್ತು. ದಂತ ಆರೋಗ್ಯ ಶಿಬಿರದ ಮೂಲಕ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ತೋರಲಾಗಿದೆ.
ಮುಂದಿನ ದಿನಗಳಲ್ಲೂ ಸಂಘದ ಮೂಲಕ ಮತ್ತಷ್ಟು ಕಾರ್ಯ ಕ್ರಮಗಳನ್ನು ಆಯೋಜಿಸಲಾಗುವದು ಎಂದು ಶೋಭಾ ಸುಬ್ಬಯ್ಯ ತಿಳಿಸಿದರು.
ಗೋಷ್ಠಿಯಲ್ಲಿ ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಎನ್.ಎ. ಅಪ್ಪಯ್ಯ, ಕಾರ್ಯದರ್ಶಿ ಶ್ಯಾಂ ಪೂಣಚ್ಚ, ಸಮಿತಿ ಸದಸ್ಯ ಎನ್.ಡಿ. ಚರ್ಮಣ್ಣ ಹಾಗೂ ಕಾಲೆÉೀಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಪಾರ್ವತಿ ಅಪ್ಪಯ್ಯ ಉಪಸ್ಥಿತರಿದ್ದರು.