ಗೋಣಿಕೊಪ್ಪಲು, ಮೇ 27: ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ತಾ. 28 ರಂದು (ಇಂದು) ಬೆಳಿಗ್ಗೆ 7 ಗಂಟೆಯಿಂದ ನಡೆಯಲಿದೆ ಎಂದು ಪೊನ್ನಂಪೇಟೆ ಅರಣ್ಯ ಇಲಾಖೆಯ ಅರ್.ಎಪ್.ಒ. ಗಂಗಾಧರ ತಿಳಿಸಿದ್ದಾರೆ.
ಈ ಭಾಗದ ತೋಟ ಮಾಲೀಕರು ಕಾರ್ಮಿಕರು ಸಹಕರಿಸಲು ಕೋರಿದ್ದಾರೆ. ತಾವಳಗೇರಿಯಿಂದ ಮುಂಜಾನೆ ಕಾರ್ಯಚರಣೆ ಆರಂಭಗೊಳ್ಳಲಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಮನವಿ ಮಾಡಿದ್ದಾರೆ.