ಶನಿವಾರಸಂತೆ, ಮೇ 29: ಪಟ್ಟಣದ ಒಂದನೇ ವಿಭಾಗದಲ್ಲಿರುವ ಶತಮಾನ ಕಂಡ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ತಡೆಗೋಡೆಯ ತಳಭಾಗದ ಮಣ್ಣು ಕುಸಿದಿದೆ. ಸದ್ಯದಲ್ಲೇ ತಡೆಗೋಡೆ ಕುಸಿಯವ ಹಂತ ತಲಪಿದೆ. ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾ. 29ರಂದು ಪುಟ್ಟ ವಿದ್ಯಾರ್ಥಿಗಳು ಹೊಸ ಉತ್ಸಾಹ, ಹೊಸ ಹುರುಪಿನಿಂದ ಶಾಲೆಗೆ ಬರುತ್ತಾರೆ. ಆಟವಾಡುತ್ತಾ ತಡೆಗೋಡೆ ಬಳಿ ಬಂದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ರಜೆ ದಿನಗಳಲ್ಲಿ ದುರಸ್ತಿಪಡಿಸಬಹುದಾಗಿದ್ದರೂ, ಶಾಲಾ ಅಭಿವೃದ್ಧಿ ಸಮಿತಿ, ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿದರೂ ಮೌನವಹಿಸಿದ್ದಾರೆ. ವಿದ್ಯಾ ಇಲಾಖೆಯವರಾಗಲೀ, ಸಂಬಂಧಪಟ್ಟ ಅಧಿಕಾರಿಗಳಾಗಲೀ ತಕ್ಷಣ ಎಚ್ಚೆತ್ತು ತಡೆಗೋಡೆಯನ್ನು ದುರಸ್ತಿಪಡಿಸುವಂತೆ ಪೋಷಕರಾದ ಮಂಜುನಾಥ್, ರಾಮಯ್ಯ, ರಾಜಪ್ಪ, ಸುರೇಶ್, ಇತರರು ಆಗ್ರಹಿಸಿದ್ದಾರೆ.