ಸಿದ್ದಾಪುರ, ಮೇ 25: ನೆಲ್ಲಿಹುದಿಕೇರಿ-ಕುಂಬಾರಗುಂಡಿ ವ್ಯಾಪ್ತಿಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯ ಡಾಮರೀಕರಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಕುಂಬಾರಗುಂಡಿಯಲ್ಲಿ ನೂರಾರು ಮನೆಗಳಿದ್ದು, ರಸ್ತೆಯು ಪೂರ್ಣವಾಗಿ ಹದಗೆಟ್ಟಿದೆ. ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ಮಳೆಗಾಲದ ಸಂದರ್ಭ ಹೊಂಡಗಳಲ್ಲಿ ನೀರು ನಿಲ್ಲುತ್ತಿದ್ದು, ಶಾಲಾ ಮಕ್ಕಳಿಗೂ ನಡೆದಾಡಲು ತೊಂದರೆ ಎದುರಾಗಿದೆ. ರಸ್ತೆ ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಈ ಹಿಂದೆ ಪ್ರತಿಭಟನೆಯನ್ನು ಮಾಡಲಾಗಿದ್ದು, ಈವರೆಗೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.