ವೀರಾಜಪೇಟೆ, ಮೇ 25: ದೇವಣಗೇರಿ ಈಶ್ವರ ಭಗವತಿ ದೇವರ ವಾರ್ಷಿಕ ಹಬ್ಬವು ಮೇ 27ರಿಂದ ಜೂನ್ 1ರವರೆಗೆ ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷ ಮುಕ್ಕಾಟಿರ ರಾಜಪ್ಪ ತಿಳಿಸಿದರು.
ಪತ್ರಿಕೆಗೆ ಲಿಖಿತ ಹೇಳಿಕೆ ನೀಡಿ ಸುಮಾರು 600 ವರ್ಷಗಳ ಹಿಂದೆ ಕಾರಣಾಂತರಗಳಿಂದ ನಿಂತು ಹೋಗಿದ್ದ ಹಬ್ಬವನ್ನು ಆಚರಿಸಲಾಗುತ್ತಿದೆ. ತಾ. 27 ರಂದು ಪೂರ್ವಹ್ನ 8 ಗಂಟೆಗೆ ಮಹಾಗಣಪತಿ ಹೋಮದೊಂದಿಗೆ ಆರಂಭವಾಗುತ್ತಿದೆ. ತೋರಣ ಮೂಹೂರ್ತ, ಮೃತ್ಯಂಜಯ ಹೋಮ, ಕಲಶಾಭಿಷೇಕ ಅನ್ನದಾನ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ.
ತಾ. 28 ಮತ್ತು 29 ರಂದು ಮುಂಜಾನೆ 5 ಗಂಟೆಗೆ ಇರಳುಬೆಳಕು ಉತ್ಸವ ಮೂರ್ತಿಯ ಪ್ರದಕ್ಷಿಣೆ, ವಿವಿಧ ಬಗೆಯ ಪೂಜಾ ಕೈಂಕರ್ಯಗಳು ಅಪರಾಹ್ನ ಮಹಾಪೂಜೆ ಅನ್ನದಾನ ನಡೆಯಲಿದೆ. ತಾ. 30 ರಂದು ಮುಂಜಾನೆ 5 ಗಂಟೆಗೆ ಇರಳುಬೆಳಕು ಉತ್ಸವ ಮೂರ್ತಿಯ ಪ್ರದಕ್ಷಿಣೆ, ವಿವಿಧ ಪೂಜೆಗಳೊಂದಿಗೆ 11 ಗಂಟೆಗೆ ಎತ್ತು ಪೋರಾಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವದು ಸಂಜೆ 4.30 ದೇವರ ದರ್ಶನ, ತಾ. 31ರಂದು ಪೂರ್ವಾಹ್ನ 7 ಗಂಟೆಗೆÉ ನಿತ್ಯಪೂಜೆಯೊಂದಿಗೆ ಪ್ರಾರಂಭಗೊಂಡು ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ. ಸಂಜೆ 4.30 ಗಂಟೆಗೆ ದೇವರ ಜಳಕದೊಂದಿಗೆ ಮುಕ್ತಾಯಗೊಳ್ಳಲಿದೆ. ಜೂನ್ 1 ರಂದು ಲೆಕ್ಕಪತ್ರ ಮಂಡನೆ ನಡೆಯಲಿದೆ ಎಂದು ತಿಳಿಸಿದ್ದಾರೆ.